

ಟೆಂಡರ್ ಕರೆದು ಕಾರ್ಯಾದೇಶ ನೀಡಿದ ನಗರ ಪಾಲಿಕೆ
ಮೂರ್ನಾಲ್ಕು ತಿಂಗಳ ಒಳಗೆ ಹೊಸ ಬೈಸಿಕಲ್ ಸೇವೆ ಪ್ರಾರಂಭ
ಸದೇಶ್ ಕಾರ್ಮಾಡ್ ಮೈಸೂರು
ಐದು ವರ್ಷಗಳ ಹಿಂದೆ ರಾಜ್ಯದಲ್ಲಿ ಪ್ರಥಮ ಬಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಾರಿಗೆ ತಂದ ‘ಟ್ರಿಣ್ ಟ್ರಿಣ್ ಪಬ್ಲಿಕ್ ಬೈಸಿ ಕಲ್ ಷೇರಿಂಗ್’ ಯೋಜನೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಇದರಿಂದ ಉತ್ತೇಜಿತವಾದ ನಗರ ಪಾಲಿಕೆ ಹಳೆಯ ಸೈಕಲ್‌ಗಳನ್ನು ಬದಲಾಯಿಸಿ ಅತ್ಯಾಧುನಿಕ ಸೈಕಲ್‌ಗಳನ್ನು ಸಾರ್ವಜನಿಕ ಬಳಕೆಗೆ ನೀಡಲು ಮುಂದಾಗಿದೆ.
ಟ್ರಿಣ್ ಟ್ರಿಣ್ ಸೈಕಲ್ ಯೋಜನೆ ಜಾರಿಗೆ ಖಾಸಗಿ ಸಂಸ್ಥೆಯೊಂದಿಗೆ ಮಾಡಿಕೊಂಡ ಒಡಂಬಡಿಕೆ ಅಂತ್ಯಗೊಂಡಿದೆ. ಹೀಗಾಗಿ ಹೊಸ ತಂತ್ರಜ್ಞಾನದ ಸೈಕಲ್‌ಗಳನ್ನು ಖರೀದಿಸಿ ಸಾರ್ವಜನಿಕರ ಸೇವೆಗೆ ನೀಡಲು ಪಾಲಿಕೆ ಈಗಾಗಲೇ ಟೆಂಡರ್ ಕರೆದು ಕಾರ್ಯಾದೇಶವನ್ನು ನೀಡಿದೆ. ಟೆಂಡರ್ ಪಡೆದಿರುವ ನೂತನ ಸಂಸ್ಥೆಯು ಇದೀಗ ನಗರಕ್ಕೆ ಅಗತ್ಯವಾದ ಹೊಸ ಸೈಕಲ್‌ಗಳನ್ನು ಖರೀದಿಸುವ ಹಾಗೂ ಹೊಸ ವ್ಯವಸ್ಥೆಯನ್ನು ಸಿದ್ಧಪಡಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದೆ. ಇದಕ್ಕೆ ಮೂರ‌್ನಾಲ್ಕು ತಿಂಗಳು ಸಮಯವಾಗುವ ನಿರೀಕ್ಷೆ ಹೊಂದಲಾಗಿದ್ದು, ಆ ನಂತರ ಹೊಸ ಸೈಕಲ್‌ಗಳು ಬೀದಿಗಿಳಿಯಲಿವೆ.
ಪ್ರಸ್ತುತ 450 ಬೈಸಿಕಲ್ ಹಾಗೂ 48 ನಿಲ್ದಾಣಗಳು ಇದ್ದು, ಇದನ್ನು 1000 ಬೈಸಿಕಲ್, 100 ನಿಲ್ದಾಣಕ್ಕೆ ವಿಸ್ತರಿಸಲಾಗುವುದು. ಹೊಸ ಸೈಕಲ್‌ಗಳು ಸ್ವಯಂ ಚಾಲಿತ ಸ್ಮಾರ್ಟ್ ಲಾಕ್ ವ್ಯವಸ್ಥೆಯನ್ನು ಹೊಂದಿದ್ದು, ಈ ಹಿಂದಿನ ಡಾಕಿಂಗ್ ವ್ಯವಸ್ಥೆ ಇರುವುದಿಲ್ಲ. ಸ್ಮಾರ್ಟ್ ಫೋನ್ ಮೂಲಕವೇ ಲಾಕ್ ಹಾಗೂ ಅನ್‌ಲಾಕ್ ಮಾಡುವ ವ್ಯವಸ್ಥೆ ಇರಲಿದೆ.
ಹೆಚ್ಚಿದ ಸೈಕಲ್ ಬಳಕೆ:
ಕೋವಿಡ್ ನಂತರ ನಗರದ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಾಗಿದ್ದು, ವಾಯುವಿಹಾರಕ್ಕೆ ತೆರಳುವವರು ಹಾಗೂ ಸೈಕಲ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ, ನಗರದಲ್ಲಿ ಪಬ್ಲಿಕ್ ಷೇರಿಂಗ್ ಸೈಕ್ಲಿಂಗ್ ವ್ಯವಸ್ಥೆಯಲ್ಲಿರುವ ‘ಟ್ರಿಣ್ ಟ್ರಿಣ್’ ಸೈಕಲ್‌ಗಳ ಬಳಕೆ ಪ್ರಮಾಣ ಕೂಡ ಹೆಚ್ಚಾಗಿದೆ. 2017ರ ಜೂನ್ 4 ರಂದು ಪ್ರಾರಂಭಗೊಂಡ ಬೈಸಿಕಲ್ ಹಂಚಿಕೆ ಸೇವೆಗೆ ಇದುವರೆಗೆ 15 ಸಾವಿರಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದು, ಪ್ರತಿನಿತ್ಯ 1,200 ಜನರು ಬಳಕೆ ಮಾಡುತ್ತಿದ್ದಾರೆ.
ಹೆಚ್ಚುತ್ತಿರುವ ವಾಯುಮಾಲಿನ್ಯದ ಪ್ರಮಾಣ ತಗ್ಗಿಸಲು ಪೆಟ್ರೋಲ್, ಡೀಸೆಲ್ ವಾಹನಗಳ ಬಳಕೆ ಪ್ರಮಾಣ ಕಡಿಮೆಯಾಗಬೇ ಕಾಗಿದೆ. ಇದಕ್ಕೆ ಪೂರಕವಾಗಿ ಸರ್ಕಾರ ಎಲೆಕ್ಟ್ರಿಕಲ್ ವಾಹನಗಳ ಬಳಕೆ ಹಾಗೂ ಸೈಕಲ್ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಲು ಪ್ರಾರಂಭಿಸಿದೆ. ಮೈಸೂರು ಸೇರಿದಂತೆ ರಾಜ್ಯದ ವಿವಿಧ ಪ್ರಮುಖ ನಗರಗಳಲ್ಲಿ ಸೈಕಲ್ ಟ್ರಾೃಕ್‌ಗಳು ನಿರ್ಮಾಣಗೊಳ್ಳುವ ಮೂಲಕ ಸೈಕಲ್ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿ ನಿರ್ಮಾಣಗೊಂಡ ಸೈಕಲ್ ಟ್ರಾೃಕ್ ಅತ್ಯಂತ ಜನಪ್ರಿಯವಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಸೈಕಲ್ ಸವಾರರು ಬಳಕೆ ಮಾಡುತ್ತಿದ್ದಾರೆ. ಅದೇ ರೀತಿ ಮೈಸೂರಿನಲ್ಲಿ ಸೈಕಲ್ ಟ್ರಾೃಕ್ ನಿರ್ಮಾಣಕ್ಕೆ ಪಾಲಿಕೆ ಮುಂದಾಗಿದೆ.
ದಶಕದ ಹಿಂದೆಯೇ ನಗರದಲ್ಲಿ ಸೈಕಲ್ ಟ್ರಾೃಕ್ ನಿರ್ಮಾಣ ಮಾಡಿ ಸೈಕಲ್ ಬಳಕೆಗೆ ಉತ್ತೇಜನ ನೀಡುವ ಪ್ರಯತ್ನ ನಡೆಯಿತು. ನಗ ರದ ಲಲಿತ ಮಹಲ್ ರಸ್ತೆಯ ಒಂದು ಭಾಗದಲ್ಲಿ ಸೈಕಲ್ ಟ್ರಾೃಕ್ ನಿರ್ಮಾಣ ಮಾಡಲಾಗಿತ್ತು. ಆದರೆ, ಕಾರಣಾಂತರಗಳಿಂದ ನಗರದ ಇತರ ಪ್ರಮುಖ ರಸ್ತೆಗಳಲ್ಲಿ ಸೈಕಲ್ ಟ್ರಾೃಕ್ ನಿರ್ಮಾಣ ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ನಗರದ ವಿವಿಧ ರಸ್ತೆಗಳಲ್ಲಿ ಸೈಕಲ್ ಟ್ರಾೃಕ್ ನಿರ್ಮಾಣ ಮಾಡಿ ಸೈಕಲ್ ಬಳಕೆಗೆ ಉತ್ತೇಜನ ನೀಡಲು ಪಾಲಿಕೆ ಉದ್ದೇಶಿಸಿದೆ. ಒಟ್ಟು 3.3 ಕೋಟಿ ರೂ. ವೆಚ್ಚದಲ್ಲಿ 8.72 ಕಿ.ಮೀ. ಉದ್ದದ ಸೈಕಲ್ ಟ್ರ್ಯಾಕ್ ನಿರ್ಮಾಣ ಮಾಡಲು ಪಾಲಿಕೆ ಉದ್ದೇಶಿಸಲಾಗಿದೆ. ಜೆಎಲ್‌ಬಿ ರಸ್ತೆ, ಸೀತಾವಿಲಾಸ ರಸ್ತೆ, ಬೋಗಾದಿ ರಸ್ತೆ, ವಿಶ್ವಮಾನವ ರಸ್ತೆ, ಕೃಷ್ಣರಾಜ ಬುಲೇವಾರ್ಡ್ ರಸ್ತೆ, ಚಾಮರಾಜ ಜೋಡಿ ರಸ್ತೆ, ನ್ಯೂ ಕಾಂತರಾಜೇ ಅರಸ್ ರಸ್ತೆಯಲ್ಲಿ ಸೈಕಲ್ ಟ್ರಾೃಕ್ ನಿರ್ಮಾಣ ಉದ್ದೇಶಿಸ ಹೊಂದಲಾಗಿದೆ.
ಪರಿಸರ ಸ್ನೇಹಿ ವ್ಯವಸ್ಥೆಗೆ ಉತ್ತೇಜನ ನೀಡಲು ನಗರದಲ್ಲಿ ‘ಟ್ರಿಣ್ ಟ್ರಿಣ್ ಪಬ್ಲಿಕ್ ಬೈಸಿ ಕಲ್ ಷೇರಿಂಗ್’ ಯೋಜನೆ ಜಾರಿಗೆ ತರಲಾ ಯಿತು. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಟ್ರಿಣ್ ಟ್ರಿಣ್ ಸೈಕಲ್ ಸೇವೆ ನೀಡುತ್ತಿದ್ದ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆ ಅಂತ್ಯಗೊಂಡಿದ್ದು, ಇದೀಗ ಹೊಸ ಸಂಸ್ಥೆಯು ಈ ಸೇವೆಯನ್ನು ನೀಡಲು ಟೆಂಡರ್ ಪಡೆದುಕೊಂಡಿದೆ. ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ಸೈಕಲ್ ಖರೀದಿ ಹಾಗೂ ಸೈಕಲ್ ಸೇವೆ ಒದಗಿಸಲು ಬೇಕಾದ ವ್ಯವಸ್ಥೆಯನ್ನು ಸೃಷ್ಟಿಸಲು ಅವರಿಗೆ ಮೂರ‌್ನಾಲು ತಿಂಗಳ ಕಾಲಾವಕಾಶದ ಅವಶ್ಯಕತೆ ಇದೆ. ನಾಲ್ಕು ತಿಂಗಳ ನಂತರ ಹೊಸ ಸೈಕಲ್‌ಗಳು ಜನರಿಗೆ ಬಳಕೆಗೆ ಲಭ್ಯವಾಗಲಿದೆ. ಹೊಸ ಸೈಕಲ್ ಬಂದ ನಂತರ ಹಳೆಯ ಸೈಕಲ್‌ಗಳನ್ನು ಬಳಕೆ ಮಾಡುವುದಿಲ್ಲ.
ಲಕ್ಷ್ಮೀಕಾಂತ್ ರೆಡ್ಡಿ, ನಗರ ಪಾಲಿಕೆ ಆಯುಕ್ತ