ವಿಜಯ ದಶಮಿಯಂದು ಶಿರಸಿಯಲ್ಲಿ ಟ್ರಾಫಿಕ್‌ ಪೊಲೀಸ್‌ ಠಾಣೆ

Sirsi-tragic-police-station
Published on

 ಶಿರಸಿ: ನಗರದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ನಿರ್ಮಾಣ ಕ್ಕೆ ಗುರುತಿಸಲಾದ ಟಿವಿ ಸ್ಟೇಷನ್ ಜಾಗವನ್ನು ಶಾಸಕ ಭೀಮಣ್ಣ ನಾಯ್ಕ ಬುಧವಾರ ಪರಿಶೀಲನೆ ನಡೆಸಿದರು.

ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಹಾಗೂ ಅಪಘಾತಗಳ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸ್ ಠಾಣೆ ನಿರ್ಮಾಣ ವಾಗಬೇಕು ಎಂಬ ಕೂಗೂ ಹಲವು ವರ್ಷಗಳಿಂದ ಕೇಳಿಬರುತ್ತಿತ್ತು. ಹಿಂದಿನ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು.ಆದರೆ ಜಾಗದ ಸಮಸ್ಯೆ ಯಿಂದ ನನೆಗುದಿಗೆ ಬಿದ್ದಿತ್ತು.ಇದೀಗ ಶಾಸಕ ಭೀಮಣ್ಣ ನಾಯ್ಕ ಮುತುವರ್ಜಿ ವಹಿಸಿ ಟ್ರಾಫಿಕ್ ಪೊಲೀಸ್ ಠಾಣೆ ನಿರ್ಮಾಣ ಕ್ಕೆ ಮುಂದಾಗಿದ್ದಾರೆ.

ನಗರದ ಟಿವಿ ಸ್ಟೇಷನ್ ಕೆಲವರ್ಷಗಳ ಹಿಂದೆ ಕಾರ್ಯ ಸ್ಥಗಿತಗೊಳಿಸರುವ ಕಾರಣ ಜಾಗ ಹಾಳುಬಿದ್ದಿತ್ತು. ಈ ಜಾಗ ಅಬಕಾರಿ ಇಲಾಖೆ ಅಧೀನದಲ್ಲಿದೆ. ಸುಮಾರು 1.4 ಎಕರೆ ವಿಸ್ತೀರ್ಣ ದಲ್ಲಿರುವ ಜಾಗದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಗುರುವಾರ ದಿಂದ ಸ್ಥಳವನ್ನು ಸ್ವಚ್ಛ ಗೊಳಿಸುವ ಕಾರ್ಯ ಪ್ರಾರಂಭವಾಗಲಿದ್ದು ವಿಜಯದಶಮಿ ಯಂದು ಶಿರಸಿ ಯಲ್ಲಿ ನೂತನವಾಗಿ ಟ್ರಾಫಿಕ್ ಪೊಲೀಸ್ ಠಾಣೆ ಕಾರ್ಯಾರಂಭ ಮಾಡಲಿದೆ.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಕಾವ್ಯರಾಣಿ, ನಗರಸಭೆ ಪೌರಾಯುಕ್ತ ಕಾಂತರಾಜ್, ಡಿವೈಎಸ್ಪಿ ಗಣೇಶ ಕೆ.ಎಲ್ , ಪಿಎಸ್ಐ ಗಳಾದ ನಾಗಪ್ಪ ಬಿ, ರಾಜಕುಮಾರ್ ಉಕ್ಕಲಿ, ಮಹಾಂತೇಶ್ ಕುಂಬಾರ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net