ಹೊಸ ಟ್ರಾಕ್ಟರ್ ಪಲ್ಟಿಯಾಗಿ ಯುವಕ ಸಾವು

8 smg 13
Published on

ಶಿವಮೊಗ್ಗ: ನಗರದ ಹೊರವಲಯದ ಹೊಸಕೊಪ್ಪ ತಾಂಡಾದ ಚಾನೆಲ್ ಬಳಿ ಬುಧವಾರ ಹೊಸ ಟ್ರಾಕ್ಟರ್ ಇಂಜಿನ್ ಪಲ್ಟಿಯಾಗಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಹೊಸಕೊಪ್ಪ ತಾಂಡಾದ ಶಶಿನಾಯ್ಕ (30) ಮೃತ ಯುವಕ. ಹೊಸಾ ಟ್ರಾಕ್ಟರ್ ಖರೀದಿಸಿದ್ದು ಟ್ರಯಲ್ ನೋಡುವಾಗ ರಸ್ತೆಯಲ್ಲಿ ಎದುರಿಗೆ ಬಂದ ವಾಹನ ತಪ್ಪಿಸುವಾಗ ಚಾಲಕನ ನಿಯಂತ್ರಣ ಕಳೆದುಕೊಂಡು ಮಗುಚಿ ಬಿದ್ದಿದೆ. ಈ ವೇಳೆ ಚಾಲಕನ ಪಕ್ಕದಲ್ಲಿ ಕುಳಿತಿದ್ದ ಶಶಿನಾಯ್ಕ ಟ್ರಾಕ್ಟರ್‌ನಡಿ ಸಿಲುಕಿಕೊಂಡು ಮೃತಪಟ್ಟಿದ್ದಾನೆ.

ತಕ್ಷಣವೇ ಸುತ್ತಮುತ್ತಲಿನ ಜನರು ಟ್ರಾಕ್ಟರ್ ಎತ್ತಿದರೂ ಪ್ರಯೋಜನವಾಗಿಲ್ಲ. ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದು ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net