ಹೊಸ ವಿಚಾರ ಮೈಗೂಡಿಸಿಕೊಳ್ಳಲಿ

2
ಯಕ್ಸಂಬಾದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಸಾಧಕರ ಸಮಾರಂಭವನ್ನು ಬಸವಪ್ರಸಾದ ಜೊಲ್ಲೆ ಉದ್ಘಾಟಿಸಿದರು. ಜ್ಯೋತಿಪ್ರಸಾದ ಜೊಲ್ಲೆ, ಲತಾ ವಾಳಕೆ, ವಿಜಯ ರಾವುತ, ಡಾ. ಶಿರೀಶ ಕೇರೂರ ಇದ್ದರು.
Published on

ಚಿಕ್ಕೋಡಿ: ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಶಿಕ್ಷಣ ಸಂಸ್ಥೆ ಪ್ರಾರಂಭಿಸಲಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೊಸ-ಹೊಸ ವಿಚಾರ ಮೈಗೂಡಿಸಿಕೊಳ್ಳಬೇಕು ಎಂದು ಬಸವಜ್ಯೋತಿ ಯೂತ್ ಫೌಂಡೇಷನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಹೇಳಿದರು.

ತಾಲೂಕಿನ ಯಕ್ಸಂಬಾ ಜೊಲ್ಲೆ ಎಜುಕೇಶನ್ ಸೊಸೈಟಿಯ ಶಿವಶಂಕರ ಜೊಲ್ಲೆ ಕನ್ನಡ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಹಾಗೂ ಬಸವಜ್ಯೋತಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜು ನಣದಿ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಆಶಾಜ್ಯೋತಿ ವಿಶೇಷ ಮಕ್ಕಳ ವಸತಿ ಶಾಲೆ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ ಅಧ್ಯಕ್ಷತೆ ವಹಿಸಿದ್ದರು. ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆ ಪಾಸಾದ ಸಂಸ್ಥೆಯ ಹಳೆಯ ವಿದ್ಯಾರ್ಥಿ ಸುನೀಲ ನರಸು ಮಾನೆ, ಸಿದ್ಧಾರ್ಥ ಸಿದ್ರಾಯ ಇಟ್ನಾಳ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಸೌಂದರ್ಯ ವಿರೂಪಾಕ್ಷಿ ಕುಂಬಾರ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ನಿರ್ದೇಶಕರಾದ ಲತಾ ವಾಳಕೆ, ಫೈಮಿದಾ ದಾಡಿವಾಲೆ, ಪದಾಧಿಕಾರಿಗಳಾದ ವಿಜಯ ರಾವುತ, ಡಾ. ಶಿರೀಶ ಕೇರೂರ, ಲಕ್ಷ್ಮಣ ಮಾಳಿ, ಸಿ.ಪಿ. ಬನ್ನಟ್ಟಿ, ಡಾ.ಎ.ವಿ. ಕುಲಕರ್ಣಿ, ರಾಕೇಶ ಮಗದುಮ, ರಾಜು ಹಿರೇಮಠ ಸಿಬ್ಬಂದಿ ಇದ್ದರು. ಮುಖ್ಯೋಪಾಧ್ಯಾಯ ವಿ.ಆರ್. ಭಿವಸೆ ಸ್ವಾಗತಿಸಿದರು. ಎ.ಎ.ಗುರವ ನಿರೂಪಿಸಿದರು. ಎಸ್.ಬಿ.ಮಾನೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net