ಮಹೇಶ ಗಸ್ತೆ ನೂತನ ತಹಸೀಲ್ದಾರ್​

IMG_20250630_212411_330-1.jpg
Published on

ಹುಬ್ಬಳ್ಳಿ: ಹುಬ್ಬಳ್ಳಿ ಶಹರ ನೂತನ ತಹಸೀಲ್ದಾರರಾಗಿ ಮಹೇಶ ಭಗವಂತ ಗಸ್ತೆ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.

ಬೆಳಗಾವಿ ಜಿಲ್ಲೆ ಕಿತ್ತೂರ ತಾಲೂಕಿಗೆ ವರ್ಗವಾಗಿರುವ ಈ ಹಿಂದೆ ಈ ಸ್ಥಾನದಲ್ಲಿದ್ದ ಕಲಗೌಡ ಪಾಟೀಲ ಅವರು ಗಸ್ತೆ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಗಸ್ತೆ ಅವರು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನಲ್ಲಿ ವಿಶೇಷ ತಹಸೀಲ್ದಾರರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net