

ಕಾಗವಾಡ: ನೂತನ ತಹಸೀಲ್ದಾರ್ ಆಗಿ ರವೀಂದ್ರ ಹಾದಿಮನಿ ಗುರುವಾರ ಅಧಿಕಾರ ಸ್ವೀಕರಿಸಿದರು. ಇಲ್ಲಿಯ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಜೇಶ ಬುರ್ಲಿ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರು ಬುರ್ಲಿ ಅವರನ್ನು ಸನ್ಮಾನಿಸಿ, ಬೀಳ್ಕೊಟ್ಟರು. ನೂತನ ತಹಸೀಲ್ದಾರ್ ಅವರನ್ನು ಸನ್ಮಾನಿಸಿ ಸ್ವಾಗತಿಸಿದರು.
ಗ್ರೇಡ್-2 ತಹಸೀಲ್ದಾರ್ ರಷ್ಮಿ ಜಕಾತೆ, ಉಪತಹಸೀಲ್ದಾರ್ ಅಣ್ಣಾಸಾಹೇಬ ಕೋರೆ, ಸಿಡಿಪಿಒ ಸಂಜೀವಕುಮಾರ ಸದಲಗಿ, ತಾಲೂಕಿನ ಎಲ್ಲ ಗ್ರಾಮ ಆಡಳಿತಾಧಿಕಾರಿಗಳು, ರಾಜ್ಯ ನೌಕರರ ಸಂಘದ ಪದಾಧಿಕಾರಿಗಳು, ದಲಿತ ಮುಖಂಡ ಸಂಜಯ ತಳವಳಕರ, ರಮೇಶ ಚೌಗುಲೆ, ಶ್ರೀಶೈಲ ತುಗಶೆಟ್ಟಿ, ಕಾಕಾ ಪಾಟೀಲ, ಕೆ.ಆರ್. ಪಾಟೀಲ, ರಾಜುಗೌಡ ಪಾಟೀಲ, ಅಪ್ಪಾಸಾಹೇಬ ತೋಬರೆ, ಶಿರಿಷ ಪಾಟೀಲ, ಗೌಡಪ್ಪ ಸಡ್ಡಿ, ಶಿವಾನಂದ ನವಿನಾಳೆ, ಅಶೋಕ ನಾಂದಣಿ, ಸಚಿನ ಪಾಟೀಲ, ಕಿರಣ ಪಾಟೀಲ ಇತರರಿದ್ದರು.