

ಮೂಡಲಗಿ: ಕೇಂದ್ರ ಸರ್ಕಾರ ಕಾರ್ಮಿಕರ ಭವಿಷ್ಯ ನಿಧಿ (ಇಪಿಎ್ಒ) ಹಿಂಪಡೆಯುವ 13 ಕಠಿಣ ನಿಯಮ ಸರಳೀಕರಿಸಿ ಶೇ.100ರಷ್ಟು ಇಪಿಎ್ ಹಣ ಹಿಂಪಡೆಯುವಿಕೆಗೆ ಅವಕಾಶ ನೀಡಿದೆ. ಇದರಿಂದ ಸುಮಾರು 7 ಕೋಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದರು. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಾರ್ಮಿಕರ ಭವಿಷ್ಯ ನಿಧಿ ಯೋಜನೆಯಡಿ ಶಿಣಕ್ಕಾಗಿ ಭಾಗಶ@ ಪಿಎ್ ಹಣ ಹಿಂಪಡೆಯಲು ಈಗ 10 ಬಾರಿ ಅವಕಾಶವಿದೆ. ವಿವಾಹಕ್ಕಾಗಿ ಹಣ ಪಡೆಯಲು 5 ಬಾರಿ ಅವಕಾಶ ನೀಡಲಾಗಿದೆ. ಪಿಎ್ ಖಾತೆಯಿಂದ ಭಾಗಶ@ ಹಣ ಹಿಂಪಡೆಯಲು ಕನಿಷ್ಠ ಸೇವಾ ಅವಧಿಯನ್ನು 12 ತಿಂಗಳಿಗೆ ಇಳಿಕೆ ಮಾಡಲಾಗಿದೆ ಎಂದರು. ವಿಶೇಷ ಸಂದರ್ಭಗಳ ವಿಭಾಗದಡಿ ಪ್ರಕೃತಿ ವಿಕೋಪ, ಕಾರ್ಖಾನೆ ಲಾಕೌಟ್, ನಿರಂತರ ನಿರುದ್ಯೋಗ ಅಥವಾ ಸಾಂಕ್ರಾಮಿಕ ರೋಗಗಳಂತಹ ಕಾರಣ ನೀಡದೆಯೇ ಹಣ ಹಿಂಪಡೆಯಲು ಈಗ ಅವಕಾಶವಿದೆ ಎಂದು ತಿಳಿಸಿದ್ದಾರೆ.