ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮವಹಿಸಿ

Kudlgi Protst
ಕೂಡ್ಲಿಗಿಯಲ್ಲಿ ತಹಸೀಲ್ದಾರ್ ಎಂ.ರೇಣುಕಾಗೆ ಕಿಸಾನ್ ಸಭಾದಿಂದ ಮನವಿ ಸಲ್ಲಿಸಲಾಯಿತು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ವೀರಣ್ಣ, ತಾಲೂಕು ಕಾರ್ಯದರ್ಶಿ ಕರಿಯಪ್ಪ, ಮಂಜು ಗುಡೇಕೋಟೆ, ಪಾಲಯ್ಯ, ಟಿ.ಎನ್.ಚಂದ್ರಶೇಖರ್ ಇತರರಿದ್ದರು.
Published on

ಕೂಡ್ಲಿಗಿ:  ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ರದ್ದತಿ ಖಂಡಿಸಿ ಅಖಿಲ ಭಾರತ ಕಿಸಾನ್ ಸಭಾ ತಾಲೂಕು ಘಟಕ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಎಂ. ರೇಣುಕಾ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ವೀರಣ್ಣ ಮಾತನಾಡಿ, ಬಡವರು ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ಗಳ ಮೂಲಕ ಪಡಿತರ ಪಡೆದು ಕುಟುಂಬ ನಿಭಾಯಿಸಲು ಅನುಕೂಲವಾಗಿದೆ. ಆದರೆ, ಈಚೆಗೆ ತಾಲೂಕಿನಲ್ಲಿ 1518 ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. ಸರ್ಕಾರ ಬಡವರ ಪಾಲಿನ ಅಕ್ಕಿ ಹಾಗೂ ಪಡಿತರ ರದ್ದು ಮಾಡಿ ಹಲವು ಕುಟುಂಬಗಳನ್ನು ಬೀದಿಗೆ ತಳ್ಳಿದೆ. ಆದ್ದರಿಂದ ಸರ್ಕಾರ ಎಚ್ಚೆತ್ತುಕೊಂಡು ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಅಕ್ರಮ ಸಕ್ರಮದ ಯೋಜನೆಯಡಿ ಅರ್ಜಿ ಸಲ್ಲಿಸಿದವರಿಗೆ ಪಟ್ಟಾ ನೀಡಬೇಕು. ಕೃಷಿ ಇಲಾಖೆಯಲ್ಲಿ ರೈತರಿಗೆ ಗುಣಮಟ್ಟದ ತಾಡಪಾಲ್ ನೀಡಬೇಕು. ತಾಲೂಕಿನಲ್ಲಿ ಎಸ್ಸಿ-ಎಸ್ಟಿಗೆ ಸೇರಿದ ರೈತರು ಹೆಚ್ಚಿದ್ದು, ಕೃಷಿ ಯಂತ್ರೋಪಕರಣಗಳು ಹಾಗೂ ಟ್ರ್ಯಾಕ್ಟರ್ ಸಹಾಯಧನ ಮತ್ತು ಯಂತ್ರೋಪಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆಗೊಳಿಸಬೇಕು. ಕೃಷಿ ಮಾರುಕಟ್ಟೆಯಲ್ಲಿ ಮಾರಾಟಗಾರರ ಮಳಿಗೆಗಳನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿದರು. ಆಹಾರ ಇಲಾಖೆ ಶಿರಸ್ತೇದಾರ್ ಅಜಿತ್ ಕುಮಾರ್‌ಗೂ ಮನವಿ ಸಲ್ಲಿಸಲಾಯಿತು.

ಸಿಪಿಐ ತಾಲೂಕು ಕಾರ್ಯದರ್ಶಿ ಕರಿಯಪ್ಪ, ಮಂಜು ಗುಡೆಕೋಟೆ, ಬಸಣ್ಣ ಹುಲಿಕುಂಟೆ, ಪಾಲಯ್ಯ, ಟಿ.ಎನ್. ಚಂದ್ರಶೇಖರ್, ಓಬಳೇಶ್, ಬಾಲರಾಜ, ರವೀಶ, ಮಲ್ಲಿ ತುಪ್ಪಕ್ಕನಹಳ್ಳಿ, ಮಲ್ಲಿಕಾರ್ಜುನ, ಹೇಮಣ್ಣ, ತಿಪ್ಪೇಸ್ವಾಮಿ, ಶಿವಮ್ಮ, ಸಿದ್ದಪ್ಪ, ಜಿ. ಕೊಟ್ರೇಶ್, ಡಿ. ದೇವರಾಜ್, ಕೆ.ಬಿ.ರವೀಂದ್ರ, ಕುಬೇರ, ಶಿವಣ್ಣ, ಬಸವರಾಜ್, ವೀರಪ್ಪ, ಬಸಪ್ಪ, ರಾಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net