ನೂತನ ರೈಲು ಸಂಚಾರಕ್ಕೆ ಸಚಿವರ ಸ್ಪಂದನೆ, ಕೊಟ್ಟೂರು ಪಪಂ ಸದಸ್ಯ ಕೆ.ಎಸ್.ಈಶ್ವರಗೌಡ ಮಾಹಿತಿ

250120 Kotturu New Train Manavi
Published on

ಕೊಟ್ಟೂರು: ಕೊಟ್ಟೂರು ರೈಲು ಮಾರ್ಗವಾಗಿ ಎರಡು ನೂತನ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಭರವಸೆ ನೀಡಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯ ಕೆ.ಎಸ್.ಈಶ್ವರಗೌಡ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹೆಚ್ಚುವರಿ ರೈಲು ಸಂಚಾರಕ್ಕೆ ನನ್ನ ನೇತೃತ್ವದ ನಿಯೋಗದಿಂದ ಬೆಳಗಾವಿಯಲ್ಲಿ ಸಚಿವರಿಗೆ ಈಚೆಗೆ ಮನವಿ ಸಲ್ಲಿಸಲಾಯಿತು. ಹೊಸಪೇಟೆ ಕೊಟ್ಟೂರು ಮಾರ್ಗವಾಗಿ ಬೆಂಗಳೂರಿನಿಂದ-ಹೊಸೂರು ಮತ್ತು ಬಳ್ಳಾರಿ, ಹೊಸಪೇಟೆ, ಕೊಟ್ಟೂರು ಮಾರ್ಗವಾಗಿ ದಾವಣಗೆರೆಗೆ (ಪ್ಯಾಸೆಂಜರ್) ರೈಲು ಸಂಚಾರ ಆರಂಭಿಸಬೇಕು ಎಂದು ಒತ್ತಾಯಿಸಿದಾಗ ಸಚಿವರು ಸ್ಪಂದಿಸಿದ್ದಾರೆ ಎಂದರು.

ಬಳ್ಳಾರಿಯಿಂದ ಬೆಳಗಿನ ಜಾವ ಹೊರಟು ಕೊಟ್ಟೂರು ಮಾರ್ಗವಾಗಿ ದಾವಣಗೆರೆ ತಲುಪಿ, ಮತ್ತೆ ಸಂಜೆ ಹಿಂದಿರುಗುವ ಪ್ಯಾಸೆಂಜರ್ ರೈಲು ಸಂಚಾರ ಆರಂಭಿಸಿದರೆ, ದಾವಣಗೆರೆ, ಬಳ್ಳಾರಿ ಜಿಲ್ಲೆ ಜನರಿಗೆ ಅನುಕೂಲವಾಗಲಿದೆ. ಇಲಾಖೆಯ ಆದಾಯವೂ ಹೆಚ್ಚಲಿದೆ. ಈ ಕುರಿತು ಅಂಕಿ ಅಂಶಗಳೊಂದಿಗೆ ಸಚಿವರಿಗೆ ವಿವರಿಸಲಾಗಿದೆ. ವಿಜಯಪುರ-ಯಶವಂತಪುರ ರೈಲಿಗೆ ಶ್ರೀ ಕೊಟ್ಟೂರೇಶ್ವರ ಹೆಸರು ನಾಮಕರಣ ಮಾಡುವಂತೆ ಕೋರಲಾಗಿದೆ ಎಂದು ತಿಳಿಸಿದರು. ನಿಯೋಗದಲ್ಲಿ ಹಗರಿಬೊಮ್ಮನಹಳ್ಳಿ ಎಪಿಎಂಸಿ ಅಧ್ಯಕ್ಷ ಶಿವಾನಂದ, ಮುಖಂಡರಾದ ಬೇವೂರು ಬಸವಗೌಡ, ಹೂಗಾರ ನಾಗರಾಜ್, ಬೇಕರಿ ಪ್ರಕಾಶ, ಬೇಲಿಗೌಡ್ರ ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net