ಬೆಂಗಳೂರಿಂದ ಗೋವಾಗೆ ಹೊಸ ರೈಲು

Train
Published on

ಮಂಗಳೂರು/ಕುಂದಾಪುರ: ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಭಾಗಕ್ಕೆ ಇರುವ ರೈಲುಗಳ ಜತೆಯಲ್ಲೇ ಮಂಗಳೂರಿನ ಪಡೀಲು ಮಾರ್ಗದಲ್ಲಿ ಯಶವಂತಪುರ (ಬೆಂಗಳೂರು) ಮತ್ತು ವಾಸ್ಕೋಡಗಾಮ (ಗೋವಾ) ನಡುವೆ ಹೊಸ ರೈಲು ಘೊಷಣೆಯಾಗಿದೆ.

ಶೀಘ್ರದಲ್ಲೇ ಹೊಸ ರೈಲು ಸಂಚಾರ ಆರಂಭಿಸುವ ಕುರಿತು ಹಿರಿಯ ರೈಲ್ವೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಂಗಳೂರು ಸೆಂಟ್ರಲ್ ಅಥವಾ ಮಂಗಳೂರು ಜಂಕ್ಷನ್ ನಿಲ್ದಾಣ ಪ್ರವೇಶಿಸದೆ ನಗರದ ಹೊರಗಿನಿಂದಲೇ (ಪಡೀಲ್ ಬೈಪಾಸ್) ಹೊಸ ರೈಲು ಸಂಚರಿಸುವುದರಿಂದ ಬೆಂಗಳೂರು- ಕಾರವಾರ ನಡುವೆ ಪ್ರಯಾಣಿಕರಿಗೆ ಸುಮಾರು ಮೂರು ಗಂಟೆ ಪ್ರಯಾಣದ ಅವಧಿ ಉಳಿತಾಯವಾಗಲಿದೆ.

ಕರಾವಳಿ ಭಾಗದ ಜನರಿಗೆ ಗೋವಾದ ದಾಬೊಲಿಮ್ ವಿಮಾನ ನಿಲ್ದಾಣ ಸಂಪರ್ಕ ಕೂಡ ಸುಲಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net