ಕ್ಲಾಥ್ ಮರ್ಚಂಟ್ಸ್ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

28dvk 7
Published on

ಬೆಳಗಾವಿ: ಇಲ್ಲಿನ ಬೆಳಗಾವಿ ಕ್ಲಾಥ್ ಮರ್ಚಂಟ್ಸ್ ಅಸೊಸಿಯೇಷನ್ ನೂತನ ಅಧ್ಯಕ್ಷರಾಗಿ ಸತೀಶ ತೆಂಡೂಲ್ಕರ ಆಯ್ಕೆಯಾಗಿದ್ದಾರೆ.

ಮಂಗಳವಾರ ಜರುಗಿದ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತೆಂಡೂಲ್ಕರ ಅಧ್ಯಕ್ಷ, ಮುಕೇಶ ಸಂಘವಿ ಮತ್ತು ರಾಜು ಪಾಲಿವಾಲಾ ಉಪಾಧ್ಯಕ್ಷ, ಮುಕೇಶ ಖೋಡಾ ಕಾರ್ಯದರ್ಶಿ, ಕಮಲೇಶ ಖೋಡಾ ಜಂಟಿ ಕಾರ್ಯದರ್ಶಿ, ಲಾಲಚಂದ ಚಾಪ್ರು ಖಜಾಂಚಿ, ನಿತೇಶ ಜೈನ್ ಜಂಟಿ ಖಜಾಂಚಿಯಾಗಿ ಆಯ್ಕೆಯಾದರು.

ಸಭೆಯಲ್ಲಿ ಹಿಂದಿನ ಅಧ್ಯಕ್ಷ ಹೇಮೇಂದ್ರ ಪೋರವಾಲ್ ಅವರು ನೂತನ ಅಧ್ಯಕ್ಷ ತೆಂಡೂಲ್ಕರಗೆ ಅಧಿಕಾರ ಹಸ್ತಾಂತರ ಮಾಡಿದರು.

ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ತೆಂಡೂಲ್ಕರ್, ಬೆಳಗಾವಿ ಜವಳಿ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಬೆಳಗಾವಿಯ ಜಿಡಿಪಿಯಲ್ಲಿ ಜವಳಿ ಮಾರುಕಟ್ಟೆಯದ್ದೆ ಸಿಂಹಪಾಲಿದೆ. ನಗರದ ವಿವಿಧ ಕ್ಷೇತ್ರದ ಒಟ್ಟಾರೆ ಉದ್ಯೋಗ ಪ್ರಮಾಣದಲ್ಲಿ ಶೇ.35ರಷ್ಟು ಜನರಿಗೆ ಜವಳಿ ಮಾರುಕಟ್ಟೆಯಲ್ಲಿಯೇ ಉದ್ಯೋಗ ನೀಡಲಾಗಿದೆ. ಆದರೆ ಇದಕ್ಕೆ ತಕ್ಕಂತೆ ಸರ್ಕಾರದಿಂದ ನಮಗೆ ಅನೇಕ ಸೌಲಭ್ಯಗಳು ಸಿಗಬೇಕಾಗಿದ್ದು, ಪಾರ್ಕಿಂಗ್ ಸಮಸ್ಯೆ ನಿವಾರಣೆ ಸೇರಿದಂತೆ ಅನೇಕ ಬೇಡಿಕೆಗಳಿವೆ. ಈ ಬಗ್ಗೆ ಶೀಘ್ರವೆ ಜವಳಿ ಸಚಿವರು ಹಾಗೂ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಹಿರಿಯ ಸದಸ್ಯರಾದ ಕಿಶೋರ ತೊಲಾನಿ, ನವರತನ್ ವೋರಾ, ಮೋಹನಲಾಲಜಿ ವೋರಾ, ರಮೇಶ ಭಂಡಾರಿ, ರಮೇಶ ಜೈನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net