ಮಹಾರಾಣಿ ನೆನಪಿಗಾಗಿ ಹೊಸ ಅಂಚೆ ಕಾರ್ಡ್ ಬಿಡುಗಡೆ

Post Card
Published on

ಮೈಸೂರು: ಅಂಚೆ ಇಲಾಖೆಯು ನಗರದ ಅನ್ವೇಷಣಾ ಸೇವಾ ಟ್ರಸ್ಟ್ ಸಹಯೋಗದಲ್ಲಿ ಮಹಾರಾಣಿ ದೇವಾಜಮ್ಮಣ್ಣಿ ಅವರ ನೆನಪಿನಲ್ಲಿ ಹೊರ ತಂದಿರುವ ವಿಶೇಷ ಅಂಚೆ ಕಾರ್ಡನ್ನು ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಗಣ್ಯರು ಬಿಡುಗಡೆಗೊಳಿಸಿದರು.

ಕುವೆಂಪು ಭಾಷಾ ಭಾರತಿ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ.ಪ್ರಧಾನ ಗುರುದತ್ತ ಮಾತನಾಡಿ, ದೇಶದಲ್ಲಿ ಮಹಾರಾಜರ ರೀತಿಯಲ್ಲಿಯೇ ಮಹಾರಾಣಿಯರು ಕೂಡ ಉತ್ತಮ ಕೆಲಸ ಮಾಡಿದ್ದಾರೆ. ಹೀಗಾಗಿ, ಅವರ ಇತಿಹಾಸ ತಿಳಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ಮೈಸೂರು ಅಂಚೆ ವಿಭಾಗದ ಹಿರಿಯ ಅಧಿಕಾರಿ ಡಾ. ಏಂಜೆಲ್ ರಾಜ್ ಮಾತನಾಡಿ, ತಾವು ಮೈಸೂರು ಮಹಾರಾಜರ ಇತಿಹಾಸ ಕುರಿತು ಓದುವಾಗ ದೇವಾಜಮ್ಮಣ್ಣಿ ಅವರ ಬಗ್ಗೆ ತಿಳಿಯಿತು. ಈ ಭಾಗದಲ್ಲಿ ಸಿಡುಬು ಕಾಣಿಸಿಕೊಂಡಾಗ ಜನತೆ ಲಸಿಕೆ ಹಾಕಿಕೊಳ್ಳಲು ಹೆದರಿದ್ದ ವೇಳೆ ದೇವಾಜಮ್ಮಣ್ಣಿ ಅವರೇ ಮೊದಲ ಲಸಿಕೆ ಹಾಕಿಸಿಕೊಂಡು ಜನರಲ್ಲಿ ಧೈರ್ಯ ತುಂಬಿದ್ದರು ಎಂಬುದು ತಿಳಿಯಿತು. ಹೀಗಾಗಿ ಇವರ ಬಗ್ಗೆ ಜನತೆಗೂ ಮಾಹಿತಿ ದೊರೆಯಲೆಂಬ ಕಾರಣದಿಂದ ಇವರ ನೆನಪಿನಲ್ಲಿ ಈ ವಿಶೇಷ ಅಂಚೆ ಕಾರ್ಡ್‌ನ್ನು ಇಲಾಖೆ ಹೊರ ತಂದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net