ಶಶಿಕುಮಾರ್ ಮಂಗ್ಳೂರು ಪೊಲೀಸ್ ಕಮಿಷನರ್

new commi
Published on

ಮಂಗಳೂರು: ಹೊಸ ವರ್ಷಕ್ಕೆ ಮಂಗಳೂರಿನ ನೂತನ ಪೊಲೀಸ್ ಆಯುಕ್ತರಾಗಿ ಎನ್.ಶಶಿಕುಮಾರ್ ನೇಮಕಗೊಂಡಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತರಾಗಿದ್ದ ವಿಕಾಶ್ ಕುಮಾರ್ ವಿಕಾಶ್ ಅವರನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಡಿಐಜಿ ಆಗಿ ವರ್ಗಾಯಿಸಲಾಗಿದೆ.

ಜೂನ್ 29ರಂದು ಅಧಿಕಾರ ವಹಿಸಿಕೊಂಡಿದ್ದ ವಿಕಾಶ್ ಅವರನ್ನು 6 ತಿಂಗಳಲ್ಲೇ ವರ್ಗಾಯಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ವಿಕಾಶ್ ಕಾರ್ಯವೈಖರಿ ಬಗ್ಗೆ ಮಂಗಳೂರಿನ ಸಂಸದ, ಶಾಸಕರ ವಲಯದಲ್ಲಿ ತೀವ್ರ ಅಸಮಾಧಾನವಿದ್ದುದು ವರ್ಗಾವಣೆಗೆ ಕಾರಣ ಎನ್ನಲಾಗಿದೆ. ಜನವರಿ 1ರಿಂದಲೇ ಅನ್ವಯವಾಗುವಂತೆ ಹೊಸ ವರ್ಗಾವಣೆ ನಡೆದಿದೆ. ಚಿತ್ರದುರ್ಗ ಮೂಲದ ಎನ್.ಶಶಿಕುಮಾರ್ 2007ನೇ ಬ್ಯಾಚ್‌ನ ಅಧಿಕಾರಿ. ಬಿಎಸ್ಸಿ ಕೃಷಿ ಪದವೀಧರರು. ಈ ಮೊದಲು ಬೆಂಗಳೂರು ಉತ್ತರ ಡಿಸಿಪಿ ಆಗಿ, ವೈರ್‌ಲೆಸ್ ವಿಭಾಗದ ಎಸ್‌ಪಿ ಆಗಿದ್ದರು.

ಇದೇ ವೇಳೆ, ಮಂಗಳೂರಿನ ಡಿಸಿಪಿ(ಕಾನೂನು ಸುವ್ಯವಸ್ಥೆ) ಪ್ರಭಾರ ಆಗಿದ್ದ ಹರಿರಾಮ್ ಶಂಕರ್ ಅವರ ಅಧಿಕೃತ ನೇಮಕ ಆದೇಶವೂ ಪ್ರಕಟವಾಗಿದೆ. ಈ ಹಿಂದೆ ಕುಂದಾಪುರ ಎಎಸ್ಪಿ ಆಗಿದ್ದ ಹರಿರಾಂ ಇತ್ತೀಚೆಗಷ್ಟೇ ಮಂಗಳೂರಿಗೆ ವರ್ಗಾವಣೆಯಾಗಿ ಪ್ರಭಾರ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net