

ಜಮಖಂಡಿ: ಉತ್ತರ ಕರ್ನಾಟಕ ಅಭಿವೃದ್ಧಿಗೆ ಕಿತ್ತೂರ ಕಲ್ಯಾಣ ಕರ್ನಾಟಕ ಸೇನಾ ಪಾರ್ಟಿಗೆ ಎಲ್ಲರೂ ಆಶೀರ್ವಾದ ಮಾಡಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸಿದ್ದನಗೌಡ ಪಾಟೀಲ ಹೇಳಿದರು.
ನಗರದ ರಮಾ ನಿವಾಸದಲ್ಲಿ ಬುಧವಾರ ಪಕ್ಷದ ಧ್ವಜವನ್ನು ಬಿಡುಗಡೆಗೊಳಿಸಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಅಭಿವೃದ್ಧಿಗೆ ಯುವಕರು ಉತ್ಸುಕರಾಗಿದ್ದಾರೆ. ಆ ನಿಟ್ಟಿನಲ್ಲಿ ಪಕ್ಷದಲ್ಲಿ ಯುವಕರಿಗೆ ಆದ್ಯತೆ ನೀಡಲಾಗುವುದು ಎಂದರು.
ರಾಷ್ಟ್ರೀಯ ಪಕ್ಷಗಳಿಂದ ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯದ ಬಗ್ಗೆ ತಿಳಿಸುವುದರ ಜತೆಗೆ ನಮ್ಮ ಭಾಗ ಅಭಿವೃದ್ಧಿಗಾಗಿ ಪಕ್ಷವನ್ನು ಹುಟ್ಟು ಹಾಕಿದ್ದೇವೆ. ನಮ್ಮ ಹಕ್ಕಿಗಾಗಿ ನಮ್ಮ ಹೋರಾಟ ಘೋಷಣೆಯೊಂದಿಗೆ ಕಿತ್ತೂರ ಕಲ್ಯಾಣ ಕರ್ನಾಟಕ ಸೇನಾ ಪಕ್ಷದ ಕಾರ್ಯಕರ್ತರನ್ನು ಮುಂದಿನ ಸ್ಥಳೀಯ ಸಂಘ ಸಂಸ್ಥೆ ಸೇರಿ ಎಲ್ಲ ಚುನಾವಣೆಗಳಲ್ಲಿ ಕಣಕ್ಕೆ ಇಳಿಸಲಾಗುವುದು ಎಂದರು.
ಸಂಗಮೇಶ ಬಿಳೆಯಲಿ, ಸಂಜು ಪಾಟೀಲ, ರಾಜಶೇಖರ ಮಂಗಳೂರ, ಶ್ರೀಕಾಂತ ಮಠಪತಿ, ಕಲ್ಲಪ್ಪ ಬಿರಾದಾರ, ಪ್ರಕಾಶ ಬೀರಾದರ, ಗುರುರಾಜ ಗುರವ, ಜೈಪ್ರಕಾಶ ನಾಂದ್ರೇಕರ, ಪ್ರವೀಣ ನಾಯಕ ಮತ್ತಿತರರಿದ್ದರು.