

ನೂತನ ಸರ್ಕಾರ ರಚನೆ ಆಗಿದ್ದೇ ತಡ ಆಯಕಟ್ಟಿನ ಹುದ್ದೆಗಳಿಗೆ ಹೊಸ ಅಧಿಕಾರಿಗಳ ಆಗಮನವಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತೆಯಾಗಿ ರೇಣುಕಾ ಸುಕುಮಾರ ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಹು-ಧಾ ಮಹಾನಗರ ಪಾಲಿಕೆಗೆ ಆಯುಕ್ತರಾಗಿ ಡಾ. ಈಶ್ವರ ಉಳ್ಳಾಗಡ್ಡಿ, ಅವಳಿ ನಗರದ ಅಭಿವೃದ್ಧಿಗೆ ಹೈಟೆಕ್ ಟಚ್ ನೀಡುತ್ತಿರುವ ಸ್ಮಾರ್ಟ್ ಸಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾಗಿ ಡಾ. ರುದ್ರೇಶ ಘಾಳಿ ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ಹೊಸಬರಾಗಿದ್ದರೂ ಅವಳಿ ನಗರದ ಸಮಸ್ಯೆಗಳು ಹಳೆಯದ್ದಾಗಿವೆ. ಈ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಿ ಎನ್ನುವ ಉದ್ದೇಶದಿಂದ ‘ವಿಜಯವಾಣಿ’ ಇಲ್ಲಿ ಪ್ರಮುಖ ಸಂಗತಿಗಳ ಬಗ್ಗೆ ಗಮನ ಸೆಳೆದಿದೆ.
ಈಗ ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ. 2018ರಲ್ಲಿ ಅವರು ಹು-ಧಾ ಪೊಲೀಸ್ ಆಯುಕ್ತಾಲಯದಲ್ಲಿ ಡಿಸಿಪಿಯಾಗಿ (ಕಾನೂನು ಮತ್ತು ಸುವ್ಯವಸ್ಥೆ) ಕರ್ತವ್ಯ ನಿರ್ವಹಿಸಿದ್ದರು. ಇಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಅವರಿಗೆ ಅರಿವಿದೆ. ಆಯುಕ್ತರಾಗಿರುವುದರಿಂದ ಹು-ಧಾ ಅವಳಿ ನಗರದ ಜನರು ಶಾಂತಿಯಿಂದಿರಬಹುದು ಎಂಬ ನಂಬಿಕೆ. ಇವರ ಮುಂದಿರುವ ಸವಾಲುಗಳು ಹೀಗಿವೆ.
ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಜುಲೈ 7ರಂದು ಹು-ಧಾ ಮಹಾನಗರ ಪಾಲಿಕೆಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹುಬ್ಬಳ್ಳಿ-ಧಾರವಾಡವನ್ನು ಪ್ರಮುಖವಾಗಿ ಕಾಡುತ್ತಿರುವುದು ಸ್ವಚ್ಛತೆ ಸಮಸ್ಯೆ ಹಾಗೂ ಮೂಲಸೌಕರ್ಯದ್ದು. ಇನ್ನಿತರ ಏನೆಲ್ಲಾ ಸಮಸ್ಯೆಗಳಿಗೆ ಪರಿಹಾರ ಬೇಕು ಎನ್ನುವುದು ಇಲ್ಲಿದೆ.
ಹಿರಿಯ ಶ್ರೇಣಿ (ಸೂಪರ್ ಟೈಮ್ ಸ್ಕೇಲ್) ಕೆಎಎಸ್ ಅಧಿಕಾರಿ ಡಾ. ರುದ್ರೇಶ ಘಾಳಿ ಜುಲೈ 19ರಂದು ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಸಿಟಿಗಳನ್ನು ಸ್ಮಾರ್ಟ್ ಮಾಡುವ ಗುರುತರ ಜವಾಬ್ದಾರಿ ಇವರ ಮೇಲಿದೆ. ಇದಕ್ಕೊಂದಿಷ್ಟು ಗಮನಸೆಳೆಯುವ ಟಿಪ್ಸ್ ಇಲ್ಲಿವೆ.