ವಾಣಿಜ್ಯೋದ್ಯಮ ಸಂಘಕ್ಕೆ ಪ್ರಭಾಕರ ಅಧ್ಯಕ್ಷ

Oplus_16908288
Oplus_16908288
Published on

ಬೆಳಗಾವಿ: ವಾಣಿಜ್ಯೋದ್ಯಮ ಸಂಘ(ಚೆಂಬರ್ ಆಫ್ ಕಾಮರ್ಸ್)ಕ್ಕೆ 2025-26ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಬುಧವಾರ ಆಯ್ಕೆ ಮಾಡಲಾಯಿತು.

ನೂತನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷರಾಗಿ ಪ್ರಭಾಕರ ನಾಗರಮುನ್ನೋಳಿ, ಕಾರ್ಯದರ್ಶಿಯಾಗಿ ಸತೀಶ ಕುಲಕರ್ಣಿ, ಉಪಾಧ್ಯಕ್ಷರಾಗಿ ಸ್ವಪ್ನಿಲ್ ಶಹಾ ಮತ್ತು ಉದಯ ಜೋಶಿ, ಖಜಾಂಚಿಯಾಗಿ ಸಂಜಯ ಪೋತದಾರ, ಸಹ ಕಾರ್ಯದರ್ಶಿಯಾಗಿ ಮನೋಜ ಮತ್ತಿಕೊಪ್ಪ ಆಯ್ಕೆಯಾದರು.

ನಿಕಟಪೂರ್ವ ಅಧ್ಯಕ್ಷ ಸಂಜೀವ ಕತ್ತಿಶೆಟ್ಟಿ, ಕಾರ್ಯದರ್ಶಿ ರಾಜೇಂದ್ರ ಮುತಗೇಕರ ಅಧಿಕಾರ ಹಸ್ತಾಂತರಿಸಿದರು.

ಇದಕ್ಕೂ ಮೊದಲು ನಡೆದ 2024-25ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ನೂತನ ಆಡಳಿತ ಮಂಡಳಿಗೆ ಆಯ್ಕೆಯಾದ ಸಚಿನ ಸಬ್ನಿಸ್, ಎಂ.ಕೆ.ಹೆಗಡೆ, ಅಪ್ಪಾಸಾಹೇಬ ಗುರವ, ರೋಹಿತ ಕಪಾಡಿಯಾ, ಸಚಿನ ಹಂಗಿರಗೇಕರ, ವಿಜಯ ದರಗಶೆಟ್ಟಿ, ದಯಾನಂದ ನೇತಲಕರ, ವಿನಿತ ಹರಕುಣಿ, ಸುಧೀರ ಚೌಗಲೆ, ಬಸವರಾಜ ರಾಮಪುರೆ ಅವರಿಗೆ ಪ್ರಮಾಣ ಪತ್ರ ನೀಡಲಾಯಿತು.

ಸಂಜೀವ ಕತ್ತಿಶೆಟ್ಟಿ ಸ್ವಾಗತಿಸಿದರು. ರಾಜೇಂದ್ರ ಮುತಗೇಕರ 2024-25ನೇ ಸಾಲಿನ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿದರು. ಖಜಾಂಚಿ ಮನೋಜ ಮತ್ತಿಕೊಪ್ಪ ಲೆಕ್ಕಪತ್ರ ಮಂಡಿಸಿದರು. ಸ್ವಪ್ನಿಲ್ ಶಹಾ ಮತ್ತು ಉದಯ ಜೋಶಿ, ವಿಕ್ರಮ ಜೈನ್ ನ್ಯೂಸ್ ಲೆಟರ್ ಲೆಕ್ಕಪತ್ರದ ವಿವರ ನೀಡಿದರು. ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಪ್ರವೀಣ ರಂಗೋಲೆ ಮತ್ತು ಪ್ರವೀಣ ಪರಮಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net