

ಬೆಳಗಾವಿ: ಜಿಲ್ಲೆಯಲ್ಲಿ ಸೋಮವಾರ ಮತ್ತೆ 79 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಸೋಂಕಿತರ ಒಟ್ಟು ಸಂಖ್ಯೆ 24,014ಕ್ಕೆ ಹೆಚ್ಚಳವಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಲ್ತ್ ಬುಲೆಟಿನ್ ಪ್ರಕಾರ ಬೆಳಗಾವಿಯಲ್ಲಿ 19 ಜನರಿಗೆ ಸೋಂಕು ತಗುಲಿದೆ. ಗೋಕಾಕ 16, ಬೈಲಹೊಂಗಲ 6, ಅಥಣಿ 9, ಹುಕ್ಕೇರಿ 6, ಸವದತ್ತಿ ಹಾಗೂ ರಾಯಬಾಗ ತಲಾ 1, ಖಾನಾಪುರ 3, ಚಿಕ್ಕೋಡಿ 12 ಹಾಗೂ ಇತರ ಜಿಲ್ಲೆ ಮೂಲಗಳ 9 ಜನ ಸೇರಿ ಒಟ್ಟು 79 ಮಂದಿಗೆ ಸೋಂಕು ತಗುಲಿದೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ ಕರೊನಾ ಸೋಂಕಿನಿಂದ ಒಟ್ಟು 326 ಜನರು ಮೃತಪಟ್ಟಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಈವರೆಗೆ 22,271 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಅಲ್ಲದೆ, 803 ಜನರ ಗಂಟಲು ದ್ರವ ಮಾದರಿ ಪರೀಕ್ಷೆಯ ವರದಿ ಬರುವುದು ಬಾಕಿ ಇದೆ.