ಪೌರಕಾರ್ಮಿಕರ ಪುತ್ರ ಈಗ ಶಾಸಕ

dvg-K.S.-Basavanthappa-1.jpg
Published on

ದಾವಣಗೆರೆ
 ಮಾಯಕೊಂಡ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಕೆ.ಎಸ್. ಬಸವಂತಪ್ಪ ದಾವಣಗೆರೆಯ ಗಾಂಧಿನಗರದವರು. ತಂದೆ, ತಾಯಿ ಇಬ್ಬರೂ ನಗರಸಭೆಯಲ್ಲಿ ಪೌರಕಾರ್ಮಿಕರಾಗಿದ್ದರು.


 ದ್ವಿತೀಯ ಪಿಯುಸಿ ವರೆಗೆ ವ್ಯಾಸಂಗ ಮಾಡಿರುವ ಬಸವಂತಪ್ಪ ನಂತರದ ದಿನಗಳಲ್ಲಿ ಸೋದರ ಮಾವ ಮಾಜಿ ಸಚಿವ ಎಚ್. ಆಂಜನೇಯ ಅವರ ಅನುಯಾಯಿಯಾಗಿ ರಾಜಕೀಯದ ನಂಟು ಬೆಳೆಸಿಕೊಂಡರು. ದಾವಣಗೆರೆ ಜಿಲ್ಲಾ ಪಂಚಾಯಿತಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಮಾಯಕೊಂಡಟಠ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ ಸೋತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net