

ಮಂಗಳೂರು: ನವಮಂಗಳೂರು ಬಂದರು ಪ್ರಾಧಿಕಾರ (ಎನ್ಎಂಪಿಎ) ದ ವತಿಯಿಂದ 76ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
ಎನ್ಎಂಪಿಎ ಅಧ್ಯಕ್ಷ ಡಾ.ಎ.ವಿ.ರಮಣ ಧ್ವಜಾರೋಹಣಗೈದು, ಬಳಿಕ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸ್ವಾತಂತ್ರೃ ಹೋರಾಟಗಾರರು ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮೊದಲಾದ ಸಂವಿಧಾನ ರಚನಾ ಸಮಿತಿಯವರನ್ನು ಸ್ಮರಿಸಿದರು. ಎನ್ಎಂಪಿಎ ಸುವರ್ಣ ಮಹೋತ್ಸವ ಆಚರಿಸುತ್ತಿದ್ದು ನಮಗೆಲ್ಲರಿಗೂ ಹೆಮ್ಮೆ ತಂದಿದೆ ಎಂದರು.
ಉಪಾಧ್ಯಕ್ಷೆ ಎಸ್.ಶಾಂತಿ, ಪದ್ಮನಾಭಾಚಾರ್ ಕೆ., ಎನ್ಎಂಪಿಎ ಮಹಿಳಾ ಸಮಾಜದ ಅಧ್ಯಕ್ಷೆ ಸುಷ್ಮಾ ಅಕ್ಕರಾಜು, ಕಾರ್ಯದರ್ಶಿ ಜಿಯೋ ಥೋಮಸ್, ಸಿಐಎಸ್ಎಫ್ ಡೆಪ್ಯುಟಿ ಕಮಾಂಡರ್ ರಾಜೇಂದ್ರ ಪಾಠಕ್ ಮೊದಲಾದವರಿದ್ದರು.
ಸಿಐಎಸ್ಎಫ್, ಎನ್ಎಂಪಿಎ ಫೈರ್ ಸರ್ವಿಸ್, ಪ್ರೈವೇಟ್ ಸೆಕ್ಯುರಿಟಿ, ಕೇಂದ್ರೀಯ ವಿದ್ಯಾಲಯ, ಎನ್ಎಂಪಿಟಿ ಇಂಗ್ಲೀಷ್ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಸಾರುವ ಸಾಂಸ್ಕೃತಿಕ ಕಾರ್ಯಕ್ರಗಳು ಜರುಗಿದವು.