ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗುವ ಸಂಕಲ್ಪ : ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಯುವರಾಜ್ ಜೈನ್ ಹೇಳಿಕೆ

mbd_aug16_1
Published on

ಮೂಡುಬಿದಿರೆ: ದೇಹಕ್ಕೆ ಶಿರ ಪ್ರಧಾನವೆಂಬತೆ, ಸಂಸ್ಥೆಯ ಉದ್ದೇಶ, ಸಂಕಲ್ಪ, ಬದ್ಧತೆಗಳ ಸಂದೇಶವನ್ನು ಹೊಂದಿದ ಲಾಂಛನ ಸಂಸ್ಥೆಗೆ ಶಿರೋಭೂಷಣವಿದ್ದಂತೆ. ಬೆಳಕಿನ ಪ್ರತೀಕ ಎಕ್ಸಲೆಂಟ್ ಲಾಂಛನದಲ್ಲಿ ಪುಸ್ತಕದ ಸಂಸ್ಕಾರ ಜ್ಯೋತಿಯ ಬೆಳಕಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕೆನ್ನುವ ಸಂಕಲ್ಪವಿದೆ ಎಂದು ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಹೇಳಿದರು.

ಕಲ್ಲಬೆಟ್ಟು ಎಕ್ಸಲೆಂಟ್ ಸಂಸ್ಥೆಗಳ ನೂತನ ಲಾಂಛನ ಅನಾವರಣ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೂಡುಬಿದಿರೆ ತಹಸೀಲ್ದಾರ್ ಶ್ರೀಧರ್ ಎಸ್.ಮುಂದಲಮನಿ ಲಾಂಛನ ಅನಾವರಣಗೊಳಿಸಿದರು. ಮಾಜಿ ಸಚಿವ, ಸಂಸ್ಥೆಯ ಗೌರವಾಧ್ಯಕ್ಷ ಕೆ.ಅಭಯಚಂದ್ರ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ಸಹ ಮುಖ್ಯ ಶಿಕ್ಷಕ ಜಯಶೀಲ್ ಕಾರ್ಯಕ್ರಮ ನಿರೂಪಿಸಿದರು. ಪ್ರಿಯಾಂಕ ಸ್ವಾಗತಿಸಿದರು. ಪ್ರಮೀಳಾ ಪಿಂಟೋ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net