ಬೆಂಗಳೂರು-ಮುರ್ಡೇಶ್ವರ ರೈಲಿಗೆ ಹೊಸ ಎಲ್‌ಎಚ್‌ಬಿ ಬೋಗಿಗಳು

lhb__1_
Published on

ಕಾರವಾರ: ಬೆಂಗಳೂರು-ಮುರುಡೇಶ್ವರ ಮತ್ತು ಬೆಂಗಳೂರು-ಕಣ್ಣೂರು ನಡುವೆ ಸಂಚರಿಸುವ ಎಕ್ಸ್ಪ್ರೆಸ್ ರೈಲುಗಳಿಗೆ ಅತ್ಯಾಧುನಿಕ ಎಲ್‌ಎಚ್‌ಬಿ ಬೋಗಿಗಳನ್ನು ಅಳವಡಿಸಲು ನೈರುತ್ಯ ರೈಲ್ವೆ ಸಜ್ಜಾಗಿದೆ.

ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಬೋಗಿಗಳನ್ನು ಅತ್ಯಾಧುನಿಕ ಎಲ್‌ಎಚ್‌ಬಿ (ಲಿಂಕ್ ಹಾಫ್‌ಮನ್ ಬುಶ್) ಬೋಗಿಗಳೊಂದಿಗೆ ಬದಲಾಯಿಸಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಽಕಾರಿ ಮಂಜುನಾಥ ಕನ್ನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈಲು ಸಂಖ್ಯೆ 16585 ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್ಪ್ರೆಸ್ ರೈಲು ಮೇ 5 ರಿಂದ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸಂಚಾರ ಆರಂಭಿಸಲಿದೆ. ಹಿಮ್ಮಾರ್ಗವಾದ ರೈಲು ಸಂಖ್ಯೆ 16586 ಮುರುಡೇಶ್ವರ- ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ರೈಲು ಮೇ 6ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸಂಚರಿಸಲಿದೆ. ನವೀಕರಿಸಲಾದ ಎಲ್‌ಎಚ್‌ಬಿ ರೇಕ್ ಒಟ್ಟು 20 ಬೋಗಿಗಳನ್ನು ಒಳಗೊಂಡಿರಲಿದ್ದು, ಇದರಲ್ಲಿ ಫಸ್ಟ್ ಕ್ಲಾಸ್ ಎಸಿ (1), ಎಸಿ 2-ಟೈರ್ (2), ಎಸಿ 3-ಟೈರ್ (4), ಸ್ಲೀಪರ್ ಕ್ಲಾಸ್ (7), ಜನರಲ್ ಸೆಕೆಂಡ್ ಕ್ಲಾಸ್ (4), ಲಗೇಜ್, ಜನರೇಟರ್ ಕಾರ್‌ಗಳು (2) ಇರಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net