

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಬಳಿಯ ನಾಗಶಾಂತಿ ಕಿಯಾ ಶೋರೂಂನಲ್ಲಿ ಗುರುವಾರ ಹೊಸ ಮಾದರಿಯ ಕಿಯಾ ಸೈರೋಸ್ ಕಾರು ಬಿಡುಗಡೆ ಮಾಡಲಾಯಿತು.
ಅತಿಥಿಗಳಾಗಿದ್ದ ಆರ್ ಜೆ ರಶೀದ್, ಶ್ರೀ ದುರ್ಗಾ ಡೆವಲಪರ್ಸ್ ಹಾಗೂ ಪ್ರಮೋಟರ್ಸ ಎಂಡಿ ವಿರೇಶ ಉಂಡಿ ಅವರು ನೂತನ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ನಾಗಶಾಂತಿ ಕಿಯಾ ಹಾಗೂ ಅನುಶರಣ ಗ್ರುಪ್ ಚೇರ್ಮನ್ ಅನ್ನಪೂರ್ಣ ಅಗಡಿ, ಎಂಡಿ ಅರುಣ ಅಗಡಿ, ಪ್ರವಿಣ ಅಗಡಿ ಇದ್ದರು.
ನೂತನ ಕಾರಿನ ವಿಶೇಷತೆಗಳೆಂದರೆ ಎಸ್ ಯುವಿಯಲ್ಲಿ ಹಲವು ಹೊಸತನಗಳನ್ನು ಪರಿಚಯಿಸಲಾಗಿದೆ. ಹೆಚ್ಚು ಸ್ಥಳಾವಕಾಶ, ಹೈಟೆಕ್ ಸೌಲಭ್ಯಗಳನ್ನು ಹೊಂದಿದೆ. ಅತ್ಯಾಧುನಿಕ ಸೌಲಭ್ಯ ಹಾಗೂ ಆರಾಮದಾಯಕ ಚಾಲನೆಗೆ ಬೇಕಾದ ಹಲವು ಅನುಕೂಲಗಳನ್ನು ಒಳಗೊಂಡಿದೆ ಎಂದು ನಾಗಶಾಂತಿ ಕಿಯಾ ಮುಖ್ಯಸ್ಥ ಮಹಾಂತೇಶ ಮಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
30 ಇಂಚಿನ ಹೈ ಡೆಫನಿಶನ್ ಟ್ರಿನಿಟಿ ಪ್ಯಾನೊರಮಿಕ್ ಡಿಸ್ಪ್ಲೇ, ಡ್ಯೂಯಲ್ ಪ್ಯಾನೊರಮಿಕ್ ಸನ್ ರೂಫ್, ರೀಯರ್ ಸ್ಲೇಡಿಂಗ್, ವೆಂಟಿಲೇಟೆಡ್ ಸೀಟ್ಸ್ ಹಾಗೂ ಕಿಯಾ ಕನೆಕ್ಟ್ 2.0 ಏರ್ ಅಪಡೇಟ್ಸ್ ಸೌಲಭ್ಯ. ಇದರಿಂದ ಗ್ರಾಹಕರು ನೇರವಾಗಿ ಮೊಬೈಲ್ ಮೂಲಕ ಅಪ್ಡೇಟ್ ಮಾಡಿಕೊಳ್ಳಬಹುದಾದ ಸಾಫ್ಟವೇರ್ ಅಳವಡಿಸಲಾಗಿದೆ. ಈಗಿರುವ ಎಸ್ ಯುವಿ ವಾಹನಗಳಿಗೆ ಹೋಲಿಸಿದರೆ ಹೆಚ್ಚು ಸ್ಥಳಾವಕಾಶ ಹೊಂದಿದೆ ಎಂದು ಹೇಳಿದರು.