ಕಿರಿಯರಿಗೆ ಹಿರಿಯ ವಕೀಲರ ಸಲಹೆ ಅಗತ್ಯ

Court News
ಉಡುಪಿಯ ನ್ಯಾಯಾಲಯದಲ್ಲಿ ಆಯೋಜಿಸಿದ್ದ ನೂತನ ನ್ಯಾಯಾಧೀಶರ ಸ್ವಾಗತ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಕಿರಣ್​ ಗಂಗಣ್ಣವರ್​ ಮಾತನಾಡಿದರು. ನ್ಯಾಯಾಧೀಶರಾದ ಎ.ಸಮೀವುಲ್ಲಾ, ಎಂ.ಪುರುಷೋತ್ತಮ್​, ಸಂತೋಷ್​ ಶ್ರೀವಾಸ್ತವ್​, ಶ್ವೇತಾಕ್ಷಿ, ಶ್ರೀನಿವಾಸ ಸುವರ್ಣ ಹಾಗೂ ಸಂದ ಅಧ್ಯಕ್ಷ ರೆನಾಲ್ಡ್​ ಪ್ರವಿಣಕುಮಾರ್​ ಉಪಸ್ಥಿತರಿದ್ದರು.
Published on

ನ್ಯಾಯಾಧೀಶ ಕಿರಣ್​ ಗಂಗಣ್ಣವರ್​ ಅಭಿಮತ | ನೂತನ ನ್ಯಾಯಾಧೀಶರಿಗೆ ಸ್ವಾಗತ

ವಿಜಯವಾಣಿ ಸುದ್ದಿಜಾಲ ಉಡುಪಿ
ಕರಾವಳಿ ಭಾಗದಲ್ಲಿ ಭೂ ನಿವೇಶನ ಸಂಬಂಧಿತ ವ್ಯಾಜ್ಯ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು, ಸೂಕ್ತವಾಗಿ ಪರಾಮರ್ಶಿಸಿ ವಾದ ಮಂಡಿಸಬೇಕಿದೆ. ಈ ನಿಟ್ಟಿನಲ್ಲಿ ಕಿರಿಯ ವಕೀಲರು ಹಿರಿಯ ವಕೀಲರ ಮಾರ್ಗದರ್ಶನ, ಸಲಹೆ, ಸೂಚನೆ ಪಡೆದು ಮುಂದುವರಿಯಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್​ ಎಸ್​. ಗಂಗಣ್ಣವರ್​ ಸಲಹೆ ನೀಡಿದರು.

ಉಡುಪಿಯ ವಿವಿಧ ನ್ಯಾಯಾಲಯಗಳಿಗೆ ವರ್ಗಾವಣೆಯಾಗಿ ಆಗಮಿಸಿದ ನೂತನ ನ್ಯಾಯಾಧೀಶರಿಗೆ ಉಡುಪಿಯ ವಕೀಲರ ಸಂಘ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೂಗುಚ್ಚ ನೀಡಿ ಸ್ವಾಗತ

ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಎ.ಸಮೀವುಲ್ಲಾ, ಪ್ರಧಾನ ಹಿರಿಯ ಸಿವಿಲ್​ ನ್ಯಾಯಾಧೀಶ ಹಾಗೂ ಮುಖ್ಯ ನಾಯಿಕ ದಂಡಾಧಿಕಾರಿ ಎಂ.ಪುರುಷೋತ್ತಮ್​, ಪ್ರಧಾನ ಸಿವಿಲ್​ ಹಾಗೂ ಜೆಎಂಎಫ್​ಸಿ ನ್ಯಾಯಾಧೀಶ ಸಂತೋಷ್​ ಶ್ರೀವಾಸ್ತವ್​, 4ನೇ ಹೆಚ್ಚುವರಿ ಸಿವಿಲ್​ ಹಾಗೂ ಜೆಎಂಎಫ್​ಸಿ ನ್ಯಾಯಾಧೀಶೆ ಶ್ವೇತಾಕ್ಷಿ ಅವರನ್ನು ವಕೀಲರ ಸಂಘದಿಂದ ಹೂಗುಚ್ಚ ನೀಡಿ ಸ್ವಾಗತಿಸಲಾಯಿತು.

ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್​ಟಿಎಸ್​ಸಿ-1(ಪೊಕ್ಸೋ) ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಉಪಸ್ಥಿತರಿದ್ದರು. ವಕೀಲೆ ರೂಪಶ್ರೀ ಪ್ರಾರ್ಥಿಸಿದರು. ವಕೀಲರ ಸಂಘದ ಅಧ್ಯಕ್ಷ ರೆನಾಲ್ಡ್​ ಪ್ರವೀಣಕುಮಾರ್​ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್​ ಎ.ಆರ್​. ವಂದಿಸಿದರು. ವಕೀಲೆ ಸಹನಾ ಕುಂದರ್​ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net