ಪತಂಜಲಿ ಯೋಗಪೀಠದಲ್ಲಿ ನೂತನ ಆಸ್ಪತ್ರೆ ಉದ್ಘಾಟನೆ; ವೈದ್ಯಕೀಯ ವಿಜ್ಞಾನದಲ್ಲಿ ಹೊಸ ಪ್ರಯತ್ನ

baba
Published on

ಹರಿದ್ವಾರ: ಪತಂಜಲಿ ಯೋಗಪೀಠದಲ್ಲಿ ಪತಂಜಲಿ ತುರ್ತು ಮತ್ತು ಕ್ರಿಟಿಕಲ್ ಕೇರ್ ಆಸ್ಪತ್ರೆಯನ್ನು ಉದ್ಘಾಟಿಸಲಾಯಿತು. ಬಾಬಾ ರಾಮದೇವ ಮತ್ತು ಆಚಾರ್ಯ ಬಾಲಕೃಷ್ಣ ಅವರ ಸಮ್ಮುಖದಲ್ಲಿ ಯಜ್ಞ, ಅಗ್ನಿಹೋತ್ರ ಮತ್ತು ವೇದ ಮಂತ್ರಗಳ ಪಠಣದೊಂದಿಗೆ ವೈದ್ಯಕೀಯ ವಿಜ್ಞಾನದ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆಯುವ ಮೂಲಕ ಆಸ್ಪತ್ರೆಯನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಬಾಬಾ ರಾಮದೇವ್ ಮಾತನಾಡಿ, ಇಂದು ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಿದೆ. ಪತಂಜಲಿಯ ಈ ನೂತನ ಹರಿದ್ವಾರದ ಆಸ್ಪತ್ರೆ ಸಂಸ್ಥೆಯ ಮೊದಲ ಹೆಜ್ಜೆಯಾಗಿದ್ದು, ಈ ಅಡಿಪಾಯವನ್ನಾಧರಿಸಿ ದೆಹಲಿಯ ಏಮ್ಸ್, ಮತ್ತಿತರ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಮಟ್ಟದಲ್ಲಿ ಸೇವೆಯನ್ನು ಒದಗಿಸಲು ಮುಂದಾಗಿದ್ದೇವೆ. ವ್ಯವಹಾರದ ದೃಷ್ಟಿಯಿಂದ ಇದು ಕಾರ್ಪೊರೇಟ್ ಆಸ್ಪತ್ರೆಯಾಗಿರದೆ, ಸೇವೆಯ ದೃಷ್ಟಿಯಿಂದ ಕಾರ್ಪೊರೇಟ್ ಆಸ್ಪತ್ರೆಯಾಗಿದೆ. ಪತಂಜಲಿಯು ಆಧುನಿಕ ವೈದ್ಯಕೀಯ ವಿಜ್ಞಾನವನ್ನು ಸಂಪೂರ್ಣವಾಗಿ ಅಗತ್ಯವಿದ್ದಾಗ ಮಾತ್ರ ಬಳಸಲಿದೆ. ಇಡೀ ಜಗತ್ತಿಗೆ ವೈದ್ಯಕೀಯ ಕ್ಷೇತ್ರದ ಹೊಸ ದೃಷ್ಟಿಕೋನವನ್ನು ತುರ್ತು ಸಂದರ್ಭಗಳಲ್ಲಿ ಒದಗಿಸಲಾಗುತ್ತದೆ. ನಮ್ಮಲ್ಲಿ ಸಮರ್ಪಿತ ವೈದ್ಯರ ತಂಡವಿದ್ದು, ಅವರು ಈ ಹೊಸ ದೃಷ್ಟಿಕೋನದಿಂದ ಸಂಯೋಜಿಸಲ್ಪಟ್ಟಿದ್ದಾರೆ. ಇನ್ನೊಂದೆಡೆ ನಮ್ಮಲ್ಲಿರುವ ಸಾಂಪ್ರದಾಯಿಕ ಜ್ಞಾನದ ಆಯುರ್ವೇದ ವೈದ್ಯರು, ಆಧುನಿಕ ವೈದ್ಯಕೀಯ ವಿಜ್ಞಾನದಲ್ಲಿ ಪರಿಣಿತರಾದ ವೈದ್ಯರು, ಹಾಗೂ ಪ್ರಕೃತಿ ಚಿಕಿತ್ಸೆಯ ತಜ್ಞರು ಕೆಲಸ ಮಾಡಲಿದ್ದಾರೆ. ಭವಿಷ್ಯದಲ್ಲಿ ಕ್ಯಾನ್ಸರ್‌ನ್ನು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸುವುದು, ಅತ್ಯಂತ ಸಂಕೀರ್ಣವೆಂದು ಪರಿಗಣಿಸಲಾದ ಮೆದುಳು, ಹೃದಯ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗಳು ಸಹ ಈ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದು ಗುರೂಜಿ ತಿಳಿಸಿದ್ದಾರೆ.

ಯೋಗ, ಆಯುರ್ವೇದದ ಜೊತೆ ಆಧುನಿಕ ಚಿಕಿತ್ಸೆ

ಶೇ. 20ರಷ್ಟು ಆಧುನಿಕ ವೈದ್ಯಕೀಯ ವಿಜ್ಞಾನದೊಂದಿಗೆ ಭಾರತೀಯ ಸಾಂಪ್ರದಾಯಿಕ ಔಷಧವನ್ನು ಶೇ.80ರಷ್ಟು ಬೆರೆಸಿ ಚಿಕಿತ್ಸೆ ನೀಡುವ ಮೂಲಕ ಜಾಗತಿಕ ವೈದ್ಯಕೀಯ ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸುವ ಉದ್ದೇಶದಿಂದ ಪತಂಜಲಿ ಯೋಗ ಪೀಠ ತನ್ನ ಮೊದಲ ಹೆಜ್ಜೆ ಇರಿಸಿದೆ. ಈ ಯೋಜನೆಯಲ್ಲಿ ನಾವು ಯಶಸ್ವಿಯಾಗಲಿದ್ದೇವೆ ಎಂದು ಆಚಾರ್ಯ ಬಾಲಕೃಷ್ಣ ಗುರೂಜಿ ವಿಶ್ವಾಸ ವ್ಯಕ್ತಪಡಿಸಿದರು. ಗುಣಪಡಿಸಲಾಗದ ಕಾಯಿಲೆಗಳಿಗೆ ಪರಿಹಾರವಾಗಿ ಯೋಗ ಮತ್ತು ಆಯುರ್ವೇದವನ್ನು ಸಹ ಅಳವಡಿಸಿಕೊಳ್ಳಬೇಕು. ಚರಕ ಮತ್ತು ಸುಶ್ರುತ ಸಂಹಿತೆ ಹೇಳುವಂತೆ ವೈದ್ಯರಿಗೆ ನೀಡಲಾಗುವ ಪ್ರತಿಜ್ಞೆಯು ನಿರ್ದಿಷ್ಟ ಔಷಧ ವ್ಯವಸ್ಥೆಯ ಬದಲಾಗಿ ರೋಗಿಯನ್ನು ಗುಣಪಡಿಸಲು ಅನ್ವಯಿಸಬೇಕು. ದೊಡ್ಡ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಗುರಿಗಳನ್ನು ನೀಡಲಾಗುತ್ತದೆ. ಆದರೆ ನಮ್ಮ ಆಸ್ಪತ್ರೆಯಲ್ಲಿ ವೈದ್ಯರಿಗೆ ರೋಗಿಗಳನ್ನು ಗುಣಪಡಿಸುವ ಗುರಿ ನೀಡಲಾಗಿದೆ ಎಂದು ಗುರೂಜಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net