ನೂತನ ಹಿರೇದೇವಿ ಮೂರ್ತಿ ಪ್ರತಿಷ್ಠಾಪನೆ

21KKNR-02
ಕುಕನೂರಿನಲ್ಲಿ ನೂತನವಾಗಿ ಹಿರೇದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.
Published on

ಕುಕನೂರು: ಪಟ್ಟಣದಲ್ಲಿ ಹಿರೇದೇವಿ ನೂತನ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಶುಕ್ರವಾರ ಮಾಡಲಾಯಿತು. ಹಿರೇದೇವಿ ಅಮ್ಮನನ್ನು ವಿಷೇಶ ಪೂಜೆ, ಪುನಸ್ಕಾರದೊಂದಿಗೆ ಅಂಬೇಡ್ಕರ್ ವೃತ್ತದ ಮೂಲಕ ಪುರ ಪ್ರವೇಶ ಮಾಡಿ, ಪ್ರತಿಷ್ಠಾಪಿಸಲಾಯಿತು.

ಪುರಪ್ರವೇಶವನ್ನು ಭಾಜಾ, ಬಭಂತ್ರಿ, ಡೊಳ್ಳು, ಮೇಳಗಳೊಂದಿಗೆ, ಮಹಿಳೆಯರ ಕಳಸ, ಕನ್ನಡಿಯೊಂದಿಗೆ ದೇವಸ್ಥಾನದವರೆಗೆ ವಿಜೃಂಭಣೆಯಿಂದ ಆಹ್ವಾನಿಸಲಾಯಿತು. ಅನ್ನ ಸಂತರ್ಪಣ ಕಾರ್ಯಕ್ರಮ ನಡೆಯಿತು.

ಪಪಂ ಉಪಾಧ್ಯಕ್ಷ ಪ್ರಶಾಂತ ಆರಬೆರಳಿನ, ಪ್ರಮುಖರಾದ ಶಿವಪ್ಪ ಭಂಡಾರಿ, ಚಂದ್ರಪ್ಪ ಆರುಬೆರಳಿನ್, ಅಂದಪ್ಪ ಭಂಡಾರಿ, ಮಲಿಯಪ್ಪ ಅಣ್ಣಿಗೇರಿ, ನಿಂಗಪ್ಪ ಗೊರ್ಲೆಕೊಪ್ಪ, ಶೇಖಪ್ಪ ಗೊರ್ಲೆಕೊಪ್ಪ, ಮಲ್ಲಿಕಾರ್ಜುನ, ನಿಂಗರಾಜ ಅಣ್ಣಿಗೇರಿ, ಮಾರುತಿ ಭಂಡಾರಿ, ಹನುಮಂತ, ನಾಗರಾಜ, ರಾಮಣ್ಣ, ಶ್ರೀಧರ, ವೀರೇಶ, ಮಹಾಂತೇಶ, ರಾಜಪ್ಪ, ದೇವರಾಜ, ಎಚ್.ಆರ್.ಹನುಮಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net