

ಭಟ್ಕಳ: ತಾಲೂಕಿನ ನ್ಯಾಷನಲ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಪಿಯು ವಿದ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ.
ಲೋಹಿತ ಮರಾಠಿ ಗುಂಡು ಎಸೆತ, ಚೆಸ್ನಲ್ಲಿ ಪ್ರಥಮ, ಚಕ್ರ ಎಸೆತದಲ್ಲಿ ದ್ವಿತೀಯ, ರಾಹುಲ್ ಗೊಂಡ ಗುಂಡು ಎಸೆತದಲ್ಲಿ ತೃತೀಯ, ಧನರಾಜ ನಾಗರಾಜ ನಾಯ್ಕ 100ಮೀ ಓಟ, 100ಮೀ ರೀಲೆ ಮತ್ತು ಉದ್ದ ಜಿಗಿತದಲ್ಲಿ ಪ್ರಥಮ, 100ಮೀ ಹರ್ಡಲ್ಸ್ನಲ್ಲಿ ದ್ವಿತೀಯ, ವಿನಾಯಕ ಗೊಂಡ ಗುಡ್ಡಗಾಡು ಓಟದಲ್ಲಿ ಪ್ರಥಮ, 3000ಮೀ ಓಟದಲ್ಲಿ ತೃತೀಯ, ತಿರುಮಲ ಗೊಂಡ 400ಮೀ ಹರ್ಡಲ್ಸ್ ನಲ್ಲಿ ಪ್ರಥಮ, ಗುಡ್ಡಗಾಡು ಓಟ ಪ್ರಥಮ, 1500ಮೀ ಮತ್ತು 3000ಮೀ ಓಟದಲ್ಲಿ ದ್ವಿತೀಯ, ಗುರುರಾಜ ನಾಯ್ಕ 100ಮೀ ರೀಲೆ ಪ್ರಥಮ, 400ಮೀ ಓಟದಲ್ಲಿ ದ್ವಿತೀಯ ಕೇಶವ ನಾಯ್ಕ 800ಮೀ ಓಟದಲ್ಲಿ ದ್ವಿತೀಯ, ಮಣಿಕಂಠ ಗೊಂಡ ಗುಡ್ಡಗಾಡು ಓಟದಲ್ಲಿ ಪ್ರಥಮ, 5000ಮೀ ಓಟದಲ್ಲಿ ಪ್ರಥಮ, ದೀಪಕ ಎತ್ತರ ಜಿಗಿತದಲ್ಲಿ ಪ್ರಥಮ, 400ಮೀ ಹರ್ಡಲ್ಸ್ನಲ್ಲಿ ದ್ವಿತೀಯ, ತಿಲಕ್ ಹೆಬ್ಬಾರ ಕರಾಟೆ 66ಕೆಜಿ ಪ್ರಥಮ, ಪ್ರತ್ಯಕ್ಷ ನಾಯ್ಕ ಕರಾಟೆ 45ಕೆಜಿ ಪ್ರಥಮ ಸುರೇಶ ಗೊಂಡ 5000ಮೀ ನಡಿಗೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಬಾಲಕರ ವಿಭಾಗದ ಗುಂಪು ಆಟಗಳಾದ ಬಾಲ್ ಬ್ಯಾಡ್ಮಿಂಟನ್, ಖೋ-ಖೋ ಹಾಗೂ ತ್ರೋಬಾಲ್ ಪ್ರಥಮ ಸ್ಥಾನ ಮತ್ತು ಶಟಲ್ ಬ್ಯಾಡ್ಮಿಂಟನ್ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಅನನ್ಯ ಗುಡ್ಡಗಾಡು ಓಟದಲ್ಲಿ ಪ್ರಥಮ, 400ಮೀ ಹರ್ಡಲ್ಸ್ ನಲ್ಲಿ ಪ್ರಥಮ, 3000ಮೀ ಓಟದಲ್ಲಿ ದ್ವಿತೀಯ, ಪವಿತ್ರ ಮಡಿವಾಳ ಉದ್ದ ಜಿಗಿತದಲ್ಲಿ ಪ್ರಥಮ, 100ಮೀ ಓಟದಲ್ಲಿ ದ್ವಿತೀಯ, ತ್ರಿವಿಧ ಜಿಗಿತದಲ್ಲಿ ದ್ವಿತೀಯ, ಸಿಂಚನಾ ತಿಮ್ಮ ನಾಯ್ಕ ಉದ್ದ ಜಿಗಿತದಲ್ಲಿ ದ್ವಿತೀಯ, ರೇಷ್ಮಾ ನಾಯ್ಕ ಈಟಿ ಎಸೆತದಲ್ಲಿ ದ್ವಿತೀಯ, ಸಿಂಚನಾ ಮೋಹನ ನಾಯ್ಕ ಎತ್ತರ ಜಿಗಿತದಲ್ಲಿ ಪ್ರಥಮ, ಸಿಂಚನಾ ಈಶ್ವರ ನಾಯ್ಕ ಗುಡ್ಡಗಾಡು ಓಟದಲ್ಲಿ ಪ್ರಥಮ, 1500ಮೀ ದ್ವಿತೀಯ, ರಾಧಿಕಾ ಸುಕ್ರಗೊಂಡ ಕರಾಟೆ 32 ಕೆಜಿ ಪ್ರಥಮ, ವಿನುತಾ ಮಂಜುನಾಥ ನಾಯ್ಕ ಕರಾಟೆ 36 ಕೆಜಿ ಪ್ರಥಮ, ರಮ್ಯ ಮೊಗೇರ ಕರಾಟೆ 52 ಕೆಜಿ ಪ್ರಥಮ, ಅಮಿತಾ ನಾಯ್ಕ ಯೋಗದಲ್ಲಿ ಪ್ರಥಮ, ಭಾಗ್ಯ]ೕ ಗೊಂಡ 3000ಮೀ ನಡಿಗೆ ಪ್ರಥಮ, ಸಾಧನಾ 3000ಮೀ ನಡಿಗೆ ತೃತೀಯ, ಪೂಜಾ ಎಮ್ ಖಾರ್ವಿಚೆಸ್ ನಲ್ಲಿ ಪ್ರಥಮ, ಲತಾದೇವಾಡಿಗ ಚಕ್ರಎಸೆತದಲ್ಲಿ ದ್ವಿತೀಯ, ಶ್ರೇಯಾಂಕ ಹ್ಯಾಮರ್ ಎಸೆತದಲ್ಲಿ ದ್ವಿತೀಯ, ಆಶಿತಾ ವೆಂಕಟೇಶ ನಾಯ್ಕ 800ಮೀ, 1500ಮೀ, 5000ಮೀ ಮತ್ತು ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ.
ಬಾಲಕಿಯರ ವಿಭಾಗದ ಗುಂಪು ಆಟಗಳಾದ ಬಾಲ್ ಬ್ಯಾಡ್ಮಿಂಟನ್, ಖೋ-ಖೋ, ಥ್ರೋಬಾಲ್, ಕಬಡ್ಡಿ ಹಾಗೂ ಶಟಲ್ ಬ್ಯಾಡ್ಮಿಂಟನ್ನಲ್ಲಿ ಪ್ರಥಮ ಸ್ಥಾನ ಮತ್ತು ವಾಲಿಬಾಲ್ ಆಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಆಶಿತಾ ವೆಂಕಟೇಶ ನಾಯ್ಕ 800ಮೀ, 1500ಮೀ, 5000ಮೀ ಮತ್ತು ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ವೈಯಕ್ತಿಕ ವೀರಾಗ್ರಣಿ ಪಡೆದುಕೊಂಡಿದ್ದಾರೆ.