ಹೊಸ ದಂತ ಪಂಕ್ತಿ ಜೋಡಣೆ

eye
Published on

ಹೊನ್ನಾವರ: ತಾಲೂಕಿನ ರೋಟರಿ ಕ್ಲಬ್ ಹಾಗೂ ಮಣಿಪಾಲದ ಕಸ್ತೂರಬಾ ದಂತ ವೈದ್ಯಕೀಯ ಮಹಾವಿದ್ಯಾಲಯ ಸಹಭಾಗಿತ್ವದಲ್ಲಿ ಆರ್ಥಿಕವಾಗಿ ಹಿಂದುಳಿದ 16 ಫಲಾನುಭವಿಗಳಿಗೆ ಮೂರನೇ ಹಂತದಲ್ಲಿ ಉಚಿತವಾಗಿ ದಂತ ಪಂಕ್ತಿ ಜೋಡಣೆ ಮಣಿಪಾಲದಲ್ಲಿ ನೆರವೇರಿತು.

ಯೋಜನೆಯ ಸಂಯೋಜಕರಾಗಿ ಜವಾಬ್ದಾರಿ ವಹಿಸಿಕೊಂಡಿರುವ ರೋಟರಿ ಕ್ಲಬ್‌ನ ಸದಸ್ಯೆ, ದಂತ ವೈದ್ಯೆ ರೊ. ಡಾ. ಗಾಯತ್ರಿ ಗುನಗಾ ಹಾಗೂ ಪಟ್ಟಣದ ಸರ್ಕಾರಿ ಆಸ್ಪತ್ರೆಯ ದಂತ ವೈದ್ಯೆ ಡಾ. ಅನುರಾಧಾ ಅವರು ಆಯ್ದ ಫಲಾನುಭವಿಗಳನ್ನು ಗುರುತಿಸಿ ಯಾದಿ ಸಿದ್ಧಪಡಿಸಿದ್ದರು. ಕಸ್ತೂರಬಾ ವೈದ್ಯಕೀಯ ಮಹಾವಿದ್ಯಾಲಯದ ದಂತ ವಿಭಾಗದ ಮುಖ್ಯಸ್ಥೆ ಡಾ. ನಯನಾ ಪ್ರಭು ನೇತೃತ್ವದಲ್ಲಿ ತಜ್ಞ ವೈದ್ಯರಿಂದ ಹೊಸ ದಂತ ಪಂಕ್ತಿ ಜೋಡಣೆ ಯಶಸ್ವಿಯಾಗಿ ನಡೆಯಿತು. ರೋಟರಿ ಪದಾಧಿಕಾರಿಗಳು ಹಾಗೂ ಸದಸ್ಯರು ಫಲಾನುಭವಿಗಳನ್ನು ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಲು ವಾಹನ ವ್ಯವಸ್ಥೆ ಕಲ್ಪಿಸಿದ್ದರು. ಈವರೆಗೆ ನಡೆದ 3 ಶಿಬಿರಗಳಲ್ಲಿ 42 ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net