ಜಯಶ್ರೀ ಕಾರೇಕರ ಜಿಲ್ಲಾ ಅಭಿವೃದ್ಧಿ ಡಿಡಿಪಿಐ

27 Dwd 6 (Jayashree Karekar
Published on

ಧಾರವಾಡ: ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಅಭಿವೃದ್ಧಿ ಡಿಡಿಪಿಐ ಹಾಗೂ ಇಲ್ಲಿಯ ಡಯಟ್ ನೂತನ ಪ್ರಾಚಾರ್ಯರಾಗಿ ಹಿರಿಯ ಕೆಇಎಸ್ ಅಽಕಾರಿ ಜಯಶ್ರೀ ಕಾರೇಕರ ಗುರುವಾರ ಅಽಕಾರ ಸ್ವೀಕರಿಸಿದರು. ಇವರು ೧೯೯೪ರಲ್ಲಿ ಕೆಇಎಸ್ ತೇರ್ಗಡೆ ಹೊಂದಿ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಶೇಷಗಿರಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿಯಾಗಿ, ೧೯೯೭ರಲ್ಲಿ ನಗರದ ಡಯಟ್ ಉಪನ್ಯಾಸಕಿಯಾಗಿ, ೨೦೦೩ರಲ್ಲಿ ಕಲಘಟಗಿ ತಾಲೂಕು ಹಿರೇಹೊನ್ನಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ಪದೋನ್ನತಿ ಹೊಂದಿ ಡಯಟ್‌ದಲ್ಲಿ ಹಿರಿಯ ಉಪನ್ಯಾಸಕಿಯಾಗಿದ್ದರು. ಕಳೆದ ವರ್ಷ ಡಿಡಿಪಿಐ ಹುದ್ದೆಗೆ ಪದೋನ್ನತಿ ಹೊಂದಿದ್ದ ಇವರು, ನಿಕಟಪೂರ್ವದಲ್ಲಿ ಹಾವೇರಿ ಡಯಟ್ ಪ್ರಾಚಾರ್ಯರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net