ಕಾರವಾರ ನಗರಸಭೆ ಪೌರಾಯುಕ್ತರಾಗಿ ಚಂದ್ರಮೌಳಿ ಅಧಿಕಾರ ಸ್ವೀಕಾರ

New-Commissar-for-Karwar-CMC
Published on

ಕಾರವಾರ: ಇಲ್ಲಿನ ನಗರಸಭೆ ನೂತನ ಪೌರಾಯುಕ್ತರಾಗಿ ಕೆ.ಚಂದ್ರಮೌಳಿ ಅವರು ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಇದುವರೆಗೆ ಪೌರಾಯುಕ್ತರಾಗಿದ್ದ ಉದಯ ಕುಮಾರ ಶೆಟ್ಟಿ ಅವರು ಅಧಿಕಾರ ಹಸ್ತಾಂತರಿಸಿದರು.
ಉದಯ ಕುಮಾರ ಶೆಟ್ಟಿ ಅವರು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾರವಾರಕ್ಕೆ ವರ್ಗವಾಗಿ ಬಂದಿದ್ದರು. ಈ ವರ್ಗಾವಣೆಯಲ್ಲಿ ಅವರಿಗೆ ಬೇರೆಡೆ ಸ್ಥಾನ ತೋರಿಸಿಲ್ಲ. ನಗರಸಭೆ ನೌಕರರು ವರ್ಗಾಯಿತ ಆಯುಕ್ತ ಉದಯಕುಮಾರ ಶೆಟ್ಟಿ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಡಿಮೆ ಅವಧಿಯಲ್ಲಿ ಮಾಡಿದ ಕೆಲಸ ಸಮಾಧಾನ ತಂದಿದೆ ಎಂದರು. ಎಇಇ ಸದಾನಂದ ಸಾಲೆಹಿತ್ತಲ, ಕಂದಾಯ ಅಧಿಕಾರಿ ರವಿ ಜಿ.ನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net