

ನರಸೀಪುರ : ಗ್ರಾಮೀಣ ಪ್ರದೇಶ, ಪಟ್ಟಣ ಹಾಗೂ ನಗರ ಪ್ರದೇಶಗಳ ಸ್ವಚ್ಛತೆಗೆ ನಿರಂತರ ದುಡಿಯುವ ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ವಿಭಾಗೀಯ ಸಂಚಾಲಕ ಆಲಗೂಡು ಚಂದ್ರಶೇಖರ ಹೇಳಿದರು.
ತಾಲೂಕಿನ ಕೊಡಗಳ್ಳಿ ಗ್ರಾಮದ ಪೌರಕಾರ್ಮಿಕರ ಕಾಲನಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭೀಮರಾವ್ ಬಡಾವಣೆ ಉದ್ಘಾಟನೆ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾಜಿ ಮೇಯರ್ ನಾರಾಯಣ ನೂತನ ಬಡಾವಣೆ ಉದ್ಘಾಟಿಸಿದರು. ಪೌರಕಾರ್ಮಿಕರ ಮುಖಂಡ ನಾಗರಾಜ್, ದಸಂಸ ಮುಖಂಡರಾದ ಮನೋಜ್ ಕುಮಾರ, ಕನ್ನಾಯಕನಹಳ್ಳಿ ಮರಿಸ್ವಾಮಿ ಇತರರು ಹಾಜರಿದ್ದರು.