ನೂತನ ರಥದ ಶುದ್ಧಿ ಪೂಜಾ ಕಾರ್ಯ ಇಂದು

FEBRA., 19, HNP., Ph.1.
Published on

ಹೊಳೆನರಸೀಪುರ : ಪಟ್ಟಣದ ಶ್ರೀ ನೀಲಕಂಠೇಶ್ವರ ದೇವಾಲಯದ ಶಾಖಾ ಮಠಕ್ಕೆ ಶ್ರೀಮಠದಿಂದ ಬ್ರಹ್ಮರಥವನ್ನು ನೀಡಲಾಗಿದ್ದು, ಫೆ.20ರಂದು ರಥದ ಶುದ್ಧಿ ಪೂಜಾ ಕೈಂಕರ್ಯ ಜರುಗಲಿದೆ.

ಶೃಂಗೇರಿಯ ಶಿಲ್ಪಿಗಳಿಂದ ನಿರ್ಮಾಣಗೊಂಡ ಬ್ರಹ್ಮರಥವನ್ನು ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಯಡತೊರೆಯ ಶ್ರೀಯೋಗಾನಂದೇಶ್ವರ ಸರಸ್ಪತೀ ಮಠದ ಶಂಕರಭಾರತೀ ಮಹಾ ಸ್ವಾಮೀಜಿ ರಥವನ್ನು ಹಸ್ತಾಂತರಿಸಿದ್ದಾರೆ.

ನೀಲಕಂಠೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ನೂತನ ರಥದಲ್ಲಿ ಜರುಗಬೇಕೆಂಬ ಸ್ವಾಮೀಜಿಯ ಆಶಯದಂತೆ ರಥದ ಶುದ್ಧಿಕಾರ್ಯ ಜರುಗಲಿದೆ ಎಂದು ಶಾಖಾ ಮಠದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net