ಮರಡಿಮಠಕ್ಕೆ ನೂತನ ರಥ ಆಗಮನ

New chariot arrives at Maradimatha
ಗುಳೇದಗುಡ್ಡದ ಮರಡಿ ಮಠಕ್ಕೆ ಬಾಗಲಕೋಟೆಯ ಮಾಯಾಚಾರಿ ಕುಟುಂಬದವರು ಕೊಡಮಾಡಿದ ನೂತನ ರಥವನ್ನು ಮೆರವಣಿಗೆ ಮೂಲಕ ತರಲಾಯಿತು. ಬಸವರಾಜ ಪಟ್ಟದಾರ್ಯ ಸ್ವಾಮಿಗಳು, ಅಭಿನವ ಕಾಡಸಿದ್ಧೇಶ್ವರ ಸ್ವಾಮಿಗಳು, ಎಂ.ಕೆ. ಪಟ್ಟಣಶೆಟ್ಟಿ, ಸಂಗಪ್ಪ ಜವಳಿ, ಪ್ರಕಾಶ ಅಂಕದ, ಚಿನ್ಮಯ ಬಾರಾಟಕ್ಕೆ, ಪ್ರಶಾಂತ ಜವಳಿ, ನಾಗೇಶಪ್ಪ ಪಾಗಿ, ಶಿವಾನಂದ ಜವಳಿ, ಸಾಗರ ಶೀಲವಂತ, ನವೀನ ಶೀಲವಂತ ಮತ್ತಿತರರಿದ್ದಾರೆ.
Published on

ಗುಳೇದಗುಡ್ಡ: ಪಟ್ಟಣದ ಮರಡಿಮಠಲ್ಲಿ 10ನೇ ಕಾಡಸಿದ್ಧೇಶ್ವರರ ಪುಣ್ಯಸ್ಮರಣೋತ್ಸವದ ನಿಮಿತ್ತ ಏ.26ರಂದು ರಥೋತ್ಸವ ಜರುಗಲಿದೆ.

ಬಾಗಲಕೋಟೆಯ ಮಾಯಾಚಾರಿ ಕುಟುಂಬದವರು ಕೊಡಮಾಡಿದ ನೂತನ ರಥವನ್ನು ಪಟ್ಟಣದ ಶರಣಮಠದ ಹತ್ತಿರ ಭಾನುವಾರ ಸಂಜೆ ಗುರುಸಿದ್ಧೇಶ್ವರ ಮಠದ ಬಸವರಾಜ ಪಟ್ಟದಾರ್ಯ ಸ್ವಾಮಿಗಳು, ಮರಡಿಮಠದ ಅಭಿನವ ಕಾಡಸಿದ್ಧೇಶ್ವರ ಸ್ವಾಮಿಗಳು ಸ್ವಾಗತಿಸಿ, ಮೆರವಣಿಗೆಗೆ ಚಾಲನೆ ನೀಡಿದರು.

ಸುಮಗಂಲೆಯರ ಕಳಸದಾರತಿ, ಸಕಲ ವಾದ್ಯಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆಯ ಮೂಲಕ ಮಠಕ್ಕೆ ರಥ ಆಗಮಿಸಿತು. 10ನೇ ಕಾಡಸಿದ್ಧೇಶ್ವರ ಶ್ರೀಗಳ ಮೂರ್ತಿಯನ್ನು ಮೆರವಣಿಗೆಯ ಮೂಲಕ ತರಲಾಯಿತು.

ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಸಂಗಪ್ಪ ಜವಳಿ, ಪ್ರಕಾಶ ಅಂಕದ, ಚಿನ್ಮಯ ಬಾರಾಟಕ್ಕೆ, ಪ್ರಶಾಂತ ಜವಳಿ, ನಾಗೇಶಪ್ಪ ಪಾಗಿ, ಶಿವಾನಂದ ಜವಳಿ, ಸಾಗರ ಶೀಲವಂತ, ನವೀನ ಶೀಲವಂತ, ವೀರಣ್ಣ ಕುರಹಟ್ಟಿ, ಬಸವರಾಜ ಸಿಂದಗಿಮಠ, ಶಿವಯ್ಯ ಕಕ್ಕಯ್ಯನಮಠ, ವೀರಯ್ಯ ಚನ್ನಸಂಗಯ್ಯನಮಠ, ಅಮರ ತಾಂಡೂರ, ಪಿ.ಎಸ್. ಮೊಖಾಶಿ, ಆರ್.ಎಸ್. ದೇಸಾಯಿ, ಉಮೇಶ ತೆಗ್ಗಿ, ಸಿದ್ದಯ್ಯ ಮಠಪತಿ, ವಿ.ಎಸ್. ಹಿರೇಮಠ, ಸಿದ್ದನಗೌಡ ಪಾಟೀಲ, ಮುತ್ತನಗೌಡ ಕಾಳನ್ನವರ, ಪಾಂಡು ಕಟಗೇರಿ, ಮಂಜುನಾಥ ನೀಲವಾನಿ, ಮಹಾಂತೇಶ ಸೋಮನಗೌಡ, ಪ್ರಭುಲಿಂಗಯ್ಯ ಹಿರೇಮಠ, ಮಂಜುನಾಥ ಚಲವಾದಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net