ಹೊಸ ಚೇಂಬರ್ ನಿರ್ಮಾಣಕ್ಕೆ ಅಗತ್ಯ ಕ್ರಮ

web1
ಮೂಡಲಗಿ ತಾಲೂಕಿನ ವೆಂಕಟಾಪುರದಲ್ಲಿ ರಾಮೇಶ್ವರ ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದರು. ಗಿರೀಶ ಹಳ್ಳೂರ, ಗೋವಿಂದ ಕೊಪ್ಪದ, ರಘುರಾಮ ಎಸ್.ವಿ, ವಿ.ಆರ್.ಭಜಂತ್ರಿ, ಮಹಾಂತೇಶ ಕೋಹಳ್ಳಿ ಇತರರು ಇದ್ದರು.
Published on

ಮೂಡಲಗಿ: ರಾಮೇಶ್ವರ ಏತ ನೀರಾವರಿ ಯೋಜನೆಯಡಿ ಇದುವರೆಗೂ ವೆಂಕಟಾಪುರ ಮುಖ್ಯ ಕಾಲುವೆಯ ತುದಿ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಭಾಗದ ರೈತರ ಜಮೀನುಗಳಿಗೆ ನೀರು ಪೂರೈಸಲು ಹೊಸ ಚೇಂಬರ್ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಲೂಕಿನ ವೆಂಕಟಾಪುರ ಗ್ರಾಮದ ರಾಮೇಶ್ವರ ಏತ ನೀರಾವರಿ ಯೋಜನೆಯ ಕಾಲುವೆಗೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಅವರು, ತಿಂಗಳೊಳಗೆ ವೆಂಕಟಾಪುರ ಮತ್ತು ಸುತ್ತಲಿನ ಗ್ರಾಮಗಳ ರೈತರ ಜಮೀನುಗಳಿಗೆ ನೀರು ಹರಿಸುವುದಾಗಿ ಭರವಸೆ ನೀಡಿದರು.

ವೆಂಕಟಾಪುರ, ಕುಲಗೋಡ, ಹಳೇಯರಗುದ್ರಿ, ತಿಮ್ಮಾಪುರ ಗ್ರಾಮಸ್ಥರು ಕುಲಗೋಡ ಸರಹದ್ದಿನಲ್ಲಿ ಹಾಯ್ದು ಹೋಗಿರುವ ಏರುಗೊಳುವೆ (ರೈಸಿಂಗ್‌ಮೈನ್) ಕಿಮೀ 7+680 ರಲ್ಲಿ ಹೊಸದಾಗಿ ವಾಲ್ವ್ ಅಳವಡಿಸಿ 150 ಮೀಟರ್ ಏರುಗೊಳವೆ ಅಳವಡಿಸಿ ಹೊಸ ಚೇಂಬರ್ ನಿರ್ಮಾಣ ಮಾಡಲಾಗುವುದು. ಚೇಂಬರ್‌ನ್ನು ವೆಂಕಟಾಪುರ ಮುಖ್ಯ ಕಾಲುವೆ ಕಿ.ಮೀ 5+264 ಗೆ ಸೇರಿಸಬೇಕೆಂದು ಈ ಭಾಗದ ರೈತರು ಬೇಡಿಕೆ ಇಟ್ಟಿದ್ದಾರೆ. ವೆಂಕಟಾಪುರ ಮುಖ್ಯ ಕಾಲುವೆಯ ತುದಿ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಪೂರೈಸಲು ಖಾಸಗಿ ಕಂಪನಿಗಳ ಮೂಲಕ ಸಮೀಕ್ಷೆ ನಡೆಸಲು ಉದ್ದೇಶಿಸಿರುವುದಾಗಿ ಹೇಳಿದರು.

ಬಾಲಚಂದ್ರ ಜಾರಕಿಹೊಳಿ ಅವರು ರೈತರೊಂದಿಗೆ 1 ಕಿಮೀ ನಡೆದು ಕಾಲುವೆ ಸ್ಥಿತಿಗತಿ ಪರಿಶೀಲಿಸಿದರು. ರೈತರ ಜಮೀನುಗಳಿಗೆ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರಭಾಶುಗರ್ಸ್‌ ನಿರ್ದೇಶಕ ಗಿರೀಶ ಹಳ್ಳೂರ, ಜಿಪಂ ಮಾಜಿ ಸದಸ್ಯ ಗೋವಿಂದ ಕೊಪ್ಪದ, ವೆಂಕಪ್ಪ ಕೋಳಿಗುಡ್ಡ, ಕಲ್ಲಪ್ಪಗೌಡ ಪಾಟೀಲ, ಲಕ್ಷ್ಮಪ್ಪ ಮಿರ್ಜಿ, ಶೇಷಪ್ಪಗೌಡ ಪಾಟೀಲ, ರಂಗಪ್ಪ ಅರಳಿಮಟ್ಟಿ, ವಿಶ್ವೇಶ್ವರ ನಾಯ್ಕ, ಬೀರಪ್ಪ ಉದ್ದವ್ವಗೋಳ, ಬಸು ನೀಲಪ್ಪಗೋಳ, ಯಲ್ಲಪ್ಪ ಗಾಜಿ, ನಾರಾಯಣ ವಟವಟಿ, ಮಹಾದೇವ ವಟವಟಿ, ನಿಂಗಪ್ಪ ಹೊರಟ್ಟಿ, ಶಂಕರೆಪ್ಪ ಕುಲಗೋಡ, ಬಾಳಪ್ಪ ಕವಟಕೊಪ್ಪ, ಭೀಮಪ್ಪ ಫಕೀರಪ್ಪಗೋಳ, ಶಿವಾನಂದ ಅಂಗಡಿ, ಸಂಗಪ್ಪ ಬಾಡಕರ, ಬೀರಪ್ಪ ಹೊಸಟ್ಟಿ, ನೀರಾವರಿ ಇಲಾಖೆಯ ಅಧಿಕಾರಿಗಳಾದ ರಘುರಾಮ ಎಸ್.ವಿ, ವಿ.ಆರ್.ಭಜಂತ್ರಿ, ಮಹಾಂತೇಶ ಕೋಹಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net