ಹೊಸ ಕಾರು ಪಡೆಯಿತು ವೃದ್ಧನ ಜೀವ

Crime Logo
Published on

ಬ್ಯಾಡಗಿ: ದೇವಸ್ಥಾನದಲ್ಲಿ ದೇವರಿಗೆ ಕೈ ಮುಗಿದು ನಿಂತಿದ್ದ ವ್ಯಕ್ತಿಗೆ ಹೊಸ ಕಾರು ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ತಾಲೂಕಿನ ಹಳೇಗುಂಗರಗೊಪ್ಪ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಗ್ರಾಮದ ನಾಗಪ್ಪ ಕನಕಾಪುರ (65) ಮೃತ ವ್ಯಕ್ತಿ. ಸಂತೋಷ ಗಿಡ್ಡಣ್ಣನವರ ಕಾರು ಹಾಯಿಸಿದ ಚಾಲಕ.

ನಾಗಪ್ಪ ಅವರು ಗ್ರಾಮದ ಮಾರುತಿ ದೇವಸ್ಥಾನದಲ್ಲಿ ದೇವರಿಗೆ ಕೈ ಮುಗಿದು ನಿಂತಿದ್ದರು. ಈ ಸಮಯದಲ್ಲಿ ಹೊಸ ಕಾರು ತೆಗೆದುಕೊಂಡು ಬಂದು ಪೂಜೆ ಮಾಡಿಸಿದ ಸಂತೋಷ ಕಾರನ್ನು ಸ್ಟಾರ್ಟ್​ ಮಾಡಿ ಒಮ್ಮಿಂದೊಮ್ಮೆಲೆ ದೇವಸ್ಥಾನದ ಒಳಗೆ ನುಗ್ಗಿಸಿ ನಾಗಪ್ಪ ಅವರಿಗೆ ಡಿಕ್ಕಿ ಪಡೆಸಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಗಾನಪ್ಪ ಅವರನ್ನು ಚಿಕಿತ್ಸೆಗಾಗಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net