

ಹಿರೇಕೆರೂರ: ಪಟ್ಟಣದಿಂದ ಬೆಳಗ್ಗೆ 7.30ಕ್ಕೆ ಹೊರಟು ಕಾಗಿನೆಲೆ, ಹಾವೇರಿ, ಲಕ್ಷೆ್ಮೕಶ್ವರ, ಗದಗ, ಇಳಕಲ್ಲ ಮಾರ್ಗವಾಗಿ ಕೂಡಲಸಂಗಮಕ್ಕೆ ಬಸ್ ಸೇವೆಗೆ ಶಾಸಕ ಯು.ಬಿ. ಬಣಕಾರ ಶನಿವಾರ ಚಾಲನೆ ನೀಡಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ, ಶಂಭುಲಿಂಗ ಹಂಸಭಾವಿ, ಘಟಕ ವ್ಯವಸ್ಥಾಪಕ ಮಂಜುನಾಥ ಹಡಪದ, ಗಣೇಶ ಊರಣಕರ, ಎಸ್.ವೈ. ಹೊರಕೇರಿ, ಸಂತೋಷ, ಸಾರ್ವಜನಿಕರು, ಚಾಲಕರು, ನಿರ್ವಾಹಕರು ಮತ್ತು ಸಿಬ್ಬಂದಿ ಇದ್ದರು.