ಕೆ.ಆರ್.ಪೇಟೆ - ಶ್ರವಣಬೆಳಗೊಳ ಬಸ್ಗೆ ಚಾಲನೆ

26-kkr1( 3-25 new bus
Published on

 ಕಿಕ್ಕೇರಿ : ಸರ್ಕಾರಿ ಬಸ್‌ಗಳ ಮೂಲಕ ನಾಗರಿಕರು ಗ್ರಾಮೀಣ ಭಾಗಕ್ಕೆ ಸುಗಮವಾಗಿ ಸಂಚರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು

ಶಾಸಕ ಎಚ್.ಟಿ. ಮಂಜು ತಿಳಿಸಿದರು.ಹೋಬಳಿಯ ಐಕನಹಳ್ಳಿ ಗ್ರಾಮಕ್ಕೆ ತಾಲೂಕು ಕೇಂದ್ರದಿಂದ ನಿತ್ಯ ಸಂಚರಿಸುವ ನೂತನ ಬಸ್‌ಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಕೆ.ಆರ್.ಪೇಟೆ, ಕಿಕ್ಕೇರಿ, ಐಕನಹಳ್ಳಿ, ಸಾಸಲು ಮಾರ್ಗವಾಗಿ ಶ್ರವಣಬೆಳಗೊಳಕ್ಕೆ ಈ ಬಸ್ ಸಂಚರಿಸಲಿದೆ. ಗ್ರಾಮಸ್ಥರ ಬಹು ದಿನದ ಬೇಡಿಕೆ ಇಂದು ಈಡೇರಿದೆ ಎಂದರು. ಶಾಲಾ, ಕಾಲೇಜು ವಿದ್ಯಾರ್ಥಿಗಳು ನಿತ್ಯ ನಿಗದಿತ ವೇಳೆಗೆ ಹಾಜರಾಗಲು ಪರಿತಪಿಸುತ್ತಿದ್ದರು. ವೃದ್ಧರು, ಅನಾರೋಗ್ಯ ಪೀಡಿತರಿಗೆ ಸಮಸ್ಯೆ ಕಾಡುತ್ತಿತ್ತು. ಎಲ್ಲವನ್ನೂ ತಿಳಿದು ನಿತ್ಯ ಬೆಳಗ್ಗೆ, ಮಧ್ಯಾಹ್ನ, ಸಂಜೆ ಬಸ್ ಸಂಚಾರದ ವ್ಯವಸ್ಥೆ ಮಾಡಲಾಗಿದೆ ಎಂದರು.ಸೂಕ್ತ ಆದಾಯ ಇಲ್ಲದೆ ಬಸ್‌ಗಳ ಸಂಚಾರ, ನಿರ್ವಹಣೆ ಸಂಸ್ಥೆಗೆ ನಷ್ಟ ಉಂಟು ಮಾಡಲಿದೆ. ಇದನ್ನು ಅರಿತು ಬಸ್ ಸೇವೆ ಉಳಿಸಿಕೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದರು. ಗ್ರಾಪಂ. ಅಧ್ಯಕ್ಷೆ ಅಂಬುಜಾ,  ಕೃಷ್ಣೇಗೌಡ, ಮುಖಂಡರಾದ ರಾಮೇಗೌಡ, ಕಾಂತರಾಜು, ಶಿವರಾಂ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net