ಮಲ್ಲೇಶ್ವರ-ಬನಶಂಕರಿ ಮಾರ್ಗದಲ್ಲಿ ನೂತನ ಬಸ್

Vijayavani-Featured-Image
Published on

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಮಲ್ಲೇಶ್ವರ-ಬನಶಂಕರಿ ಮಾರ್ಗದಲ್ಲಿ ನೂತನ ಬಸ್ ಸೇವೆಯನ್ನು ಪರಿಚಯಿಸಿದೆ.

ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಲ್ಲೇಶ್ವರ ಬಸ್ ನಿಲ್ದಾಣದಿಂದ ಮಲ್ಲೇಶ್ವರ ಸರ್ಕಲ್, ರಾಜಾಜಿನಗರ ಇಎಸ್‌ಐ, ಮಾಗಡಿ ರಸ್ತೆ ಟೋಲ್ ಗೇಟ್, ವಿಜಯನಗರ ಹಾಗೂ ನಾಯಂಡನಹಳ್ಳಿ ಜಂಕ್ಷನ್ ಮಾರ್ಗವಾಗಿ ಬನಶಂಕರಿ ಬಸ್ ನಿಲ್ದಾಣಕ್ಕೆ ನೂತನ ಮಾರ್ಗ ಸಂಖ್ಯೆ 401-ಎನ್ ಬಸ್ ಸಂಚರಿಸುತ್ತದೆ. ನಿತ್ಯ ಹೊಸ ಮಾರ್ಗದಲ್ಲಿ 35 ಸುತ್ತವಳಿ ಆಚರಣೆಯಾಗಲಿದ್ದು, ಪ್ರಯಾಣಿಕರು ಬಸ್ ಸೇವೆಯ ಅನುಕೂಲ ಪಡೆಯಬಹುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net