ಬೆಳಗಿನ ಜಾವ ಮನೆ ಬಾಗಿಲು ತೆರೆದವರಿಗೆ ಕಾದಿತ್ತು ಅಚ್ಚರಿ!; ನಾನೇ ಇಟ್ಕೋತೀನಿ ಅಂದ್ರೂ ಪೊಲೀಸರು ಬಿಡಲಿಲ್ಲ!

New born child issue
Published on

ಬೆಂಗಳೂರು: ಆಗ ತಾನೇ ಜನಿಸಿದ ಪುಟ್ಟ ಕಂದಮ್ಮನನ್ನು ಹೆತ್ತ ತಾಯಿಯೇ ರಸ್ತೆಗೆ ಎಸೆದು ಹೋಗಿದ್ದು, ಸ್ಥಳೀಯರು ಮಗುವಿನ ಅಳುವಿನ ಶಬ್ದ ಕೇಳಿ ರಕ್ಷಣೆ ಮಾಡಿರುವ ಘಟನೆ ಬನ್ನೇರುಘಟ್ಟ ರಸ್ತೆಯ ವೀವರ್ಸ್ ಕಾಲನಿಯಲ್ಲಿ ನಡೆದಿದೆ.

ಮುಂಜಾನೆ 5.45ರ ಸಮಯದಲ್ಲಿ ವೀವರ್ಸ್ ಕಾಲನಿಯ 5ನೇ ಕ್ರಾಸ್ ರಸ್ತೆ‌ ಬದಿಯಲ್ಲಿ ಮಗುವಿನ ಅಳುವಿನ‌ ಶಬ್ದ ಕೇಳಿಸಿಕೊಂಡ ನಿವಾಸಿಗಳು ಹೊರ ಬಂದು ನೋಡಿದಾಗ ರಕ್ತಸಿಕ್ತ ಸ್ಥಿತಿಯಲ್ಲಿ ನವಜಾತ ಶಿಶು ಪತ್ತೆಯಾಗಿದೆ. ಅಕ್ಕಪಕ್ಕದ ನಿವಾಸಿಗಳು ಮಗುವನ್ನು ರಕ್ಷಣೆ ಮಾಡಿದ್ದು, ಚೂಡಾಮಣಿ ಎಂಬ ಮಹಿಳೆ ಆ ಮಗುವನ್ನ ಶುಚಿ ಮಾಡಿ ಸ್ನಾನ ಮಾಡಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಕೋಣನಕುಂಟೆ ಪೋಲೀಸರ ಬಳಿ, ಚೂಡಾಮಣಿ ಆ ಮಗುವನ್ನ ಸಾಕಲು ನಮ್ಮ ಸುಪರ್ದಿಗೆ ನೀಡಿ ಎಂದು ಕೇಳಿಕೊಂಡರು. ಆದರೆ ಪೊಲೀಸರು ಅದಕ್ಕೆ ಒಪ್ಪದೇ ನವಜಾತ‌ ಹೆಣ್ಣು‌ ಮಗುವನ್ನು ವಶ ಪಡೆದು‌ಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net