ಆಸ್ಪತ್ರೆಯ ತೊಟ್ಟಿಲಲ್ಲಿ ನವಜಾತ ಶಿಶು ಪತ್ತೆ

IMG-20230804-WA0007~2
Published on

ಮುಂಡಗೋಡ: ಪಟ್ಟಣದ ಆರೋಗ್ಯ ಕೇಂದ್ರವೊಂದರ‌ 3 ದಿನದ ಹಸುಗೂಸನ್ನು ಯಾರೋ ತೊಟ್ಟಿಲಲ್ಲಿ ಹಾಕಿ ಹೋದ ಘಟನೆ ಶುಕ್ರವಾರ ನಡೆದಿದೆ.
ಜ್ಯೋತಿ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ತೊಟ್ಟಿಲನ್ನು ಇಡಲಾಗಿದೆ ಮಗುವನ್ನು ಸಾಕಲು ಸಾಧ್ಯವಾಗದವರು ತಮ್ಮ ಮಗುವನ್ನು ಈ ತೊಟ್ಟಿಲಲ್ಲಿ ಹಾಕುವಂತೆ ನಾಮಫಲಕವನ್ನು ಹಾಕಲಾಗಿದೆ.

ಯಾರೋ ತಮ್ಮ ಹಸುಗೂಸನ್ನು ನಸುಕಿನ ಜಾವ ತೊಟ್ಟಿಲಲ್ಲಿ ಹಾಕಿ ಹೋಗಿದ್ದಾರೆ.ಮಗು ಅಳುವುದನ್ನು ಗಮನಿಸಿದ ಆಸ್ಪತ್ರೆಯವರು ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಮಗುವನ್ನು ಶಿರಸಿಯ ದತ್ತು ಕೇಂದ್ರಕ್ಕೆ ನೀಡಲು ಕ್ರಮ ವಹಿಸಿದ್ದಾರೆ.
ಪಿಎಸ್ಐ ಎಚ್.ಬಿ. ಕುಡಗುಂಟಿ, ಹಾಗೂ ಸಿಬ್ಬಂದಿಗಳು,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net