ಕುಡಿವ ನೀರಿಗಾಗಿ ಹೊಸ ಬೋರ್‌ವೆಲ್

ಮುದಗಲ್ ಸಮೀಪದ ತಲೇಖಾನ್ ಗ್ರಾಪಂ ವ್ಯಾಪ್ತಿಯ ಹಡಗಲಿಯಲ್ಲಿ ಬೋರ್‌ವೆಲ್ ಕೊರೆಸುತ್ತಿರುವುದು.
ಮುದಗಲ್ ಸಮೀಪದ ತಲೇಖಾನ್ ಗ್ರಾಪಂ ವ್ಯಾಪ್ತಿಯ ಹಡಗಲಿಯಲ್ಲಿ ಬೋರ್‌ವೆಲ್ ಕೊರೆಸುತ್ತಿರುವುದು.
Published on

ಮುದಗಲ್: ಸಮೀಪದ ತಲೇಖಾನ್ ಗ್ರಾಪಂ ವ್ಯಾಪ್ತಿಯ ಹಡಗಲಿ, ತಲೇಖಾನ್ ಹಾಗೂ ಕಮಂಡಲದಿನ್ನಿ ಸೇರಿ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾದ ಹಿನ್ನೆಲೆಯಲ್ಲಿ ಪಂಚಾಯಿತಿಯಿಂದ ಬೋರ್‌ವೆಲ್ ಕೊರೆಸಲಾಗುತ್ತಿದೆ.

ಹಡಗಲಿಯಲ್ಲಿ ಕಿರುನೀರು ಸರಬರಾಜು ಯೋಜನೆಯಡಿ ನಿರ್ಮಿಸಿದ್ದ ಬೋರ್‌ವೆಲ್‌ನಲ್ಲಿ ವಿದ್ಯುತ್ ಮೋಟಾರ್ ಸಿಕ್ಕಿಕೊಂಡ ಪರಿಣಾಮ ವಾರದಿಂದ ನೀರು ಸರಬರಾಜು ಸ್ಥಗಿತವಾಗಿತ್ತು. ವಿದ್ಯುತ್ ಮೋಟಾರ್ ಹೊರತೆಗೆಯಲು ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ಪ್ರಯತ್ನ ವಿಫಲವಾಯಿತು. ಆದ್ದರಿಂದ ಅದರ ಪಕ್ಕದಲ್ಲೇ ಮತ್ತೊಂದು ಬೋರ್‌ವೆಲ್ ಕೊರೆಸಲಾಯಿತು. ಕಮಂಡಲದಿನ್ನಿಯಲ್ಲೂ ಬೋರವೆಲ್ ಕೊರೆಸಿದ್ದು, ಬೇಸಿಗೆಯಲ್ಲಿ ಅಲ್ಪ ಸ್ಲಲ್ಪ ನೀರು ದೊರಕಿದೆ.

ಸಮಸ್ಯೆ: ಸೊಂಪೂರ ಗೊಲ್ಲರಹಟ್ಟಿಯಲ್ಲಿ ಆರು ತಿಂಗಳಿಂದ ಅಂತರ್ಜಲ ಕುಸಿದು ಬೋರ್‌ವೆಲ್ ಬತ್ತಿದ ಪರಿಣಾಮ ಕುಡಿವ ನೀರಿನ ಸಮಸ್ಯೆ ಎದುರಾಗಿದೆ. ಹೈನುಗಾರಿಕೆ ಹೆಚ್ಚಿರುವುದರಿಂದ ಜನ-ಜಾನುವಾರುಗಳಿಗೂ ನೀರಿನ ಸಮಸ್ಯೆಯಾಗಿದೆ. ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಗ್ರಾಪಂ ಮಾಜಿ ಸದಸ್ಯ ಹನುಮಂತ ಗೊಲ್ಲರ ದೂರಿದ್ದಾರೆ. ಇದಕ್ಕೆ ಸದಸ್ಯ ಮಾನಸಿಂಗ್ ರಾಠೋಡ್ ಪ್ರತಿಕ್ರಿಯಿಸಿ, ಈ ಬಗ್ಗೆ ತಾಪಂ ಮತ್ತು ಜಿಪಂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಬೋರ್‌ವೆಲ್ ಕೊರೆಸುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net