ಗುರು ರಾಘವೇಂದ್ರ ಬ್ಯಾಂಕ್ ಅವ್ಯವಹಾರ ಪ್ರಕರಣ; ಅಶೋಕನ್ ನೂತನ ಆಡಳಿತಾಧಿಕಾರಿ

Sri guru raghavendra bank
Published on

ಬೆಂಗಳೂರು: ಠೇವಣಿದಾರರ ಹಣ ದುರ್ಬಳಕೆ ಆರೋಪ ಹಿನ್ನೆಲೆಯಲ್ಲಿ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ಗೆ ನೂತನ ಆಡಳಿತಾಧಿಕಾರಿಯಾಗಿ ಸಿಂಡಿಕೇಟ್ ಬ್ಯಾಂಕ್​ನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಆರ್. ಅಶೋಕನ್ ನೇಮಕ ಮಾಡಲಾಗಿದೆ ಎಂದು ಹೈಕೋರ್ಟ್​ಗೆ ಸರ್ಕಾರ ಮಾಹಿತಿ ನೀಡಿದೆ.

ಅದನ್ನು ದಾಖಲಿಸಿಕೊಂಡ ಸಿಜೆ ನೇತೃತ್ವದ ನ್ಯಾಯಪೀಠ, ನೂತನ ಆಡಳಿತಾಧಿಕಾರಿ 4 ವಾರದಲ್ಲಿ ಸಾಲ ವಸೂಲಾತಿ ಮತ್ತು ಬ್ಯಾಂಕ್ ಪುನಶ್ಚೇತನಕ್ಕೆ ವಿಸ್ತಾರವಾದ ಯೋಜನೆ ರೂಪಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಹಿಂದಿನ ಆಡಳಿತಾಧಿಕಾರಿ ಅವಧಿಯಲ್ಲಿ ಮುಕ್ತಾಯಗೊಳಿಸಿರುವ ಸಾಲದ ಖಾತೆಗಳ ಬಗ್ಗೆ ವಿಚಾರಣೆ ನಡೆಸಬೇಕು. ಸಾಲ ವಸೂಲಾತಿ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು ನಿರ್ದೇಶಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net