

ಮಂಡ್ಯ: ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ವಿ.ಆರ್.ಶೈಲಜಾ ಅವರು ವರ್ಗಾವಣೆಯಾಗಿದ್ದು, ಮಂಗಳವಾರ ಡಾ.ಎಚ್.ಎಲ್.ನಾಗರಾಜು ಅವರಿಗೆ ಅಧಿಕಾರ ವಹಿಸಿಕೊಟ್ಟರು.
ನಂತರ ಮಾತನಾಡಿದ ಶೈಲಜಾ, ಜಿಲ್ಲೆಯಲ್ಲಿ 5 ವರ್ಷದಿಂದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ಸೇವೆ ಸಂತೋಷ ತಂದಿದೆ. ಎರಡು ವರ್ಷ ಪಾಂಡವಪುರ ಉಪವಿಭಾಗಾಧಿಕಾರಿ ಹಾಗೂ ಎರಡು ವರ್ಷ ಅಪರ ಜಿಲ್ಲಾಧಿಕಾರಿಯಾಗಿ ಸತತವಾಗಿ ಮಂಡ್ಯ ಜಿಲ್ಲೆಯಲ್ಲಿ ಐದು ವರ್ಷಗಳ ಅನನ್ಯ ಸೇವೆ ಸಲ್ಲಿಸಲು ಸಹಕರಿಸಿದ ಜಿಲ್ಲಾಧಿಕಾರಿ, ಹಿರಿಯ ಅಧಿಕಾರಿ, ಸಿಬ್ಬಂದಿಗೆ ಅಭಿನಂದಿಸುತ್ತೇನೆ ಎಂದರು.
ನೂತನ ಎಡಿಸಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಕಂದಾಯ ಇಲಾಖೆಗೆ ರೈತರ ಅಲೆದಾಟವನ್ನು ತಪ್ಪಿಸಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ನಿರ್ವಹಿಸಲಾಗುವುದು. ಸರ್ಕಾರ, ಸಾರ್ವಜನಿಕರಿಗೆ, ರೈತರಿಗೆ ರೂಪಿಸಿರುವ ಯೋಜನೆಗಳನ್ನು ಪಾರದರ್ಶಕವಾಗಿ, ನಿಗದಿತ ಸಮಯದೊಳಗೆ ಒದಗಿಸುವುದು ಮೊದಲ ಆದ್ಯತೆ. ಮಂಡ್ಯ ಜಿಲ್ಲೆ ನನಗೆ ತವರು ಮನೆ. ಈ ಹಿಂದೆ ನಾಗಮಂಗಲ ಹಾಗೂ ಕೆ.ಆರ್.ಪೇಟೆ ತಹಸೀಲ್ದಾರ್ , ಪಾಂಡವಪುರದಲ್ಲಿ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದೇನೆ ಎಂದರು.