

ಕಾರವಾರ:ಉತ್ತರ ಕನ್ನಡ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಒಂದು ವರ್ಷಕ್ಕೂ ಮುಂಚೆ ವರ್ಗಾವಣೆಯಾಗಿದ್ದಾರೆ. ಅವರನ್ನು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಜಿಲ್ಲಾಧಿಕಾರಿಯನ್ನಾಗಿ ನೇಮಿಸಲಾಗಿದೆ.
ಅವರ ಜಾಗಕ್ಕೆ ಸಾಜಿದ್ ಅಹಮದ್ ಮುಲ್ಲಾ ಅವರನ್ನು ನೇಮಿಸಲಾಗಿದೆ. ಸಾಜಿದ್ ಅವರು ಈ ಹಿಂದೆ 2016 ರಿಂದ 18 ರವರೆಗೆ ಭಟ್ಕಳ ಎಸಿಯಾಗಿ ಕಾರ್ಯ ನಿರ್ವಹಿಸಿದ್ದರು. ರಾಷ್ಟ್ರೀಯ ಹೆದ್ದಾರಿ 66 ರ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ. ಸೀಬರ್ಡ್ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.
ಮೂಲತಃ ಬೆಳಗಾವಿ ಜಿಲ್ಲೆಯ ಎಂಎ ಎಂಡ್ ಪದವೀಧರರಾಗಿರುವ ಸಾಜಿದ್ ಮುಲ್ಲಾ ಅವರು 2006 ರಲ್ಲಿ ರ ಬ್ಯಾಚ್‌ನ ಕೆಎಎಸ್ ಅಧಿಕಾರಿಯಾಗಿದ್ದಾರೆ. ಪ್ರಸ್ತುತ ಜಮಖಂಡಿ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ನಿವೃತ್ತ ಸೇನಾ ಅಧಿಕಾರಿಯಾಗಿರುವ ಪ್ರಕಾಶ ಮೂಲತಃ ವಿಜಯಪುರ ಜಿಲ್ಲೆಯವರು. ಪ್ರಕಾಶ ರಜಪೂತ ಅವರು. ಬಿಎ ಬಿಎಡ್ ಪದವೀಧರರು. 2005 ರ ಬ್ಯಾಚ್‌ನ ಕೆಎಎಸ್ ಅಧಿಕಾರಿಯಾಗಿದ್ದು, ಈ ಹಿಂದೆ ಎರಡುವರೆಗೆ ವರ್ಷ ಯಾದಗಿರಿ ಅಪರ ಜಿಲ್ಲಾಧಿಕಾರಿಯಾಗಿದ್ದರು. ನಂತರ ಕಲಬುರಗಿ ವಿಭಾಗದ ಭೂ ನಿರ್ವಹಣೆ ಮತ್ತು ಯೋಜನೆಯ ಅಪರ ಪ್ರಾದೇಶಿಕ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದರು. 2023 ರ ಅಕ್ಟೋಬರ್ 4 ರಂದು ಅವರು ಉತ್ತರ ಕನ್ನಡ ಅಪರ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.