ನವಲಗುಂದ ಜನರ ಪ್ರೀತಿ, ವಿಶ್ವಾಸ ಮರೆಯಲ್ಲ

9-nvl-1 BILKODUGE
Published on

ನವಲಗುಂದ: ಪಟ್ಟಣದ ನಾಗಲಿಂಗ ಅಜ್ಜನ ಪುಣ್ಯಭೂಮಿಯ ಆಶೀರ್ವಾದದಿಂದ ಕರ್ತವ್ಯಕ್ಕೆ ಹಾಜರಾಗಿ 15 ದಿನಗಳಲ್ಲಿ ರಾಷ್ಟ್ರಪತಿ ಪದಕ ದೊರಕಿದೆ ಎಂದರೆ ತಪ್ಪಾಗಲಾರದು ಎಂದು ಸಿಪಿಐ ಧ್ರುವರಾಜ ಪಾಟೀಲ ಹೇಳಿದರು.

ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಪಟ್ಟಣದ ಪ್ರಮುಖರಿಂದ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಅಧಿಕಾರಿಗಳಿಗೆ ವರ್ಗಾವಣೆ ಅನಿವಾರ್ಯ. ಇಷ್ಟು ದಿನಗಳ ಕಾಲ ತಾಲೂಕಿನ ಜನತೆ ತೋರಿದ ಪ್ರೀತಿ, ವಿಶ್ವಾಸವನ್ನು ನಾನೆಂದೂ ಮರೆಯುವುದಿಲ್ಲ ಎಂದರು.

ನಿಂಗಪ್ಪ ಬಾರಕೇರ, ರಾಯನಗೌಡ ಪಾಟೀಲ, ಸಿರಾಜಅಹಮ್ಮದ್ ಧಾರವಾಡ, ಎಸ್.ಬಿ. ದಾನಪ್ಪಗೌಡ್ರ, ಅಣ್ಣಪ್ಪ ಭಾಗಿ, ಪ್ರಕಾಶ ಮಗಜಿ, ಶಂಕರಪ್ಪ ತೋಟದ, ಕಾಶೀಂಸಾಬ್ ಅಲ್ಲಿಬಾಯಿ, ಪತ್ರಕರ್ತ ಸಂಘದ ತಾಲೂಕಾಧ್ಯಕ್ಷ ಯಲ್ಲಪ್ಪ ಭೋವಿ, ಶರಣಪ್ಪ ಹರ್ತಿ, ವೀರನಗೌಡ ಪಾಟೀಲ, ಅರುಣಕುಮಾರ ಮೆಣಸಿನಕಾಯಿ, ಮಲ್ಲಿಕಾರ್ಜುನ ಸಂಗನಗೌಡ್ರ ಹಾಗೂ ಪಿಎಸ್​ಐ ಜನಾರ್ದನ ಭಟ್ರಳ್ಳಿ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net