

ಹಾವೇರಿ: ನಾವು ನೀಡಿದ ಟಾಸ್ಕ್ ಕಂಪ್ಲೀಟ್ ಮಾಡಿದರೆ ಡಬಲ್ ಹಣ ಬರಲಿದೆ ಎಂದು ಹೇಳಿ ನೆಟ್‌ವರ್ಕ್ ಇಂಜಿನಿಯರ್ ಒಬ್ಬರಿಗೆ ಬರೋಬ್ಬರಿ 9.62 ಲಕ್ಷ ರೂ. ರೂ. ವಂಚಿಸಿದ ಘಟನೆ ಕುರಿತು ಇಲ್ಲಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.
ಇಲ್ಲಿಯ ಶಿವಾಜಿ ನಗರದ ದೇವು ಸಿದ್ದಪ್ಪ ಬಾರ್ಕಿ (39) ಮೋಸ ಹೋದವರು.
ಇವರಿಗೆ ಅಪರಿಚಿತ ವ್ಯಕ್ತಿ ಫೋನ್ ಮಾಡಿ ನಾವು ಕಳುಹಿಸಿದ ಲಿಂಕ್‌ಅನ್ನು ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿನ ಟಾಸ್ಕ್ ಕಂಪ್ಲೀಟ್ ಮಾಡಿದರೆ ಹಣ ಡಬಲ್ ಬರಲಿದೆ ಎಂದು ನಂಬಿಸಿದ್ದಾನೆ. ಆಬಳಿಕ ದೇವು ಅವರಿಂದ 9.32 ಲಕ್ಷ ರೂ. ಹಾಕಿಸಿಕೊಂಡು ಮೋಸ ಮಾಡಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.