ಮಹಿಳೆಯರಿಂದ ವಸಂತ ಸಂಜೆ

IMG-20240626-WA0002.jpg
Published on

ಹುಬ್ಬಳ್ಳಿ: ಇಲ್ಲಿಯ ನೇತ್ರಾವತಿ ಮಹಿಳಾ ಮಂಡಳದ ವತಿಯಿಂದ ಇತ್ತೀಚೆಗೆ ವಸಂತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಮಹಿಳೆಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಮೈಸೂರಿನಲ್ಲಿ ವಿಪ್ರ ಮಹಿಳಾ ರತ್ನ ಪ್ರಶಸ್ತಿ ಪಡೆದಿರುವ ಡಾ. ಸರ್ವಮಂಗಳ ಶಾಸ್ತ್ರಿ ಅವರನ್ನು ಸನ್ಮಾನ ಮಾಡಲಾಯಿತು.

ಮಹಿಳಾ ಮಂಡಳದ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಸದಸ್ಯೆಯರಾದ ನಿರ್ಮಲಾ ರವಿಶಂಕರ್ ಐತಾಳ್, ತೇಜಶ್ವಿನಿ ಭಟ್, ಶಕುಂತಲಾ ರಾವ್ ಅವರಿಗೆ ಪುರಸ್ಕಾರ ನೀಡಲಾಯಿತು ಎಂದು ಮಹಿಳಾ ಮಂಡಳದ ಅಧ್ಯಕ್ಷೆ ಗೀತಾ ಸೋಮೇಶ್ವರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net