25, 26ರಂದು ನೆಟ್‌ಬಾಲ್ ಕ್ರೀಡಾಕೂಟ

Netball tournament on 25th and 26th
Published on

ವಿಜಯಪುರ : ಅಮೇಚೂರ್ ನೆಟ್‌ಬಾಲ್ ಅಸೋಷಿಯೇಷನ್ ಆಫ್ ಕರ್ನಾಟಕ ಹಾಗೂ ವಿಜಯಪುರ ಜಿಲ್ಲಾ ಅಮೇಚೂರ್ ನೆಟ್‌ಬಾಲ್ ಅಸೋಷಿಯೇಷನ್ ವತಿಯಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜೂ. 25, 26 ರಂದು ನೆಟ್‌ಬಾಲ್ ಕ್ರೀಡಾಕೂಟ ನಡೆಯಲಿದೆ.

ಕ್ರೀಡಾಕೂಟದಲ್ಲಿ 14 ಹಾಗೂ 16 ವರ್ಷದ ಬಾಲಕ, ಬಾಲಕಿಯರು ಭಾಗವಹಿಸಬಹುದು. ಆಸಕ್ತರು ಜೂ. 20 ರೊಳಗೆ ತಮ್ಮ ಹೆಸರು ನೋಂದಾಯಿಸಬೇಕು.

ಜಿಲ್ಲೆಯ ಎಲ್ಲ ತಾಲೂಕು ತಂಡಗಳು, ಭಾಗವಹಿಸುವ ಆಸಕ್ತ ಕ್ರೀಡಾಪಟುಗಳು ಜನ್ಮ ದಾಖಲಾತಿ, ಆಧಾರ್ ಕಾರ್ಡ್, ಫಿಟ್‌ನೆಸ್ ಸರ್ಟಿಫಿಕೆಟ್, ಫೋಟೋ, ಬ್ಯಾಂಕ್ ಪಾಸ್‌ಬುಕ್ ಪ್ರತಿಯನ್ನು ಜಿಲ್ಲಾ ಕಾರ್ಯದರ್ಶಿ ಚಂದ್ರಕಾಂತ ತಾರನಾಳ ಅವರನ್ನು ಸಂಪರ್ಕಿಸುವಂತೆ ಅಧ್ಯಕ್ಷ ವಿಲಾಸ ವ್ಯಾಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net