

ಕಿಕ್ಕೇರಿ: ಕ್ರಾಂತಿ ಎಂಬುದರ ನಿಜವಾದ ಅರ್ಥ ಬರೆದು, ದೇಶಾಭಿಮಾನಕ್ಕೆ ಸ್ಫೂರ್ತಿ ನೀಡಿದ ಸುಭಾಷ್ ಚಂದ್ರಬೋಸ್ ಬದುಕು ಭವಿಷ್ಯದ ಮಕ್ಕಳಿಗೆ ರಾಷ್ಟ್ರಾಭಿಮಾನದ ಕಿಚ್ಚು ಆಗಬೇಕು ಎಂದು ಸ್ಪಂದನಾ ಫೌಂಡೇಷನ್ ಟ್ರಸ್ಟಿ ತ್ರಿವೇಣಿ ಹೇಳಿದರು.
ಇಲ್ಲಿನ ಸ್ಪಂದನಾ ಫೌಂಡೇಷನ್, ಕನ್ನಡ ಕಲಾ ಸಂಘ ಗುರುವಾರ ಆಯೋಜಿಸಿದ್ದ ನೇತಾಜಿ ಸುಭಾಷ್ ಚಂದ್ರಬೋಸ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಎಳೆಯ ಮನಸ್ಸಿನಲ್ಲಿ ಮೊದಲು ಆತ್ಮಾಭಿಮಾನ, ದೇಶಾಭಿಮಾನ ಮೂಡಲು ನೇತಾಜಿ ಅವರಂಥ ಮಹನೀಯರ ಜೀವನ ಚರಿತ್ರೆಯನ್ನು ತಿಳಿಸಬೇಕಿದೆ. ಶ್ರೀಮಂತಿಕೆಯಲ್ಲಿ ಹುಟ್ಟಿ, ಐಪಿಎಸ್ ಓದಿ ಉನ್ನತ ಹುದ್ದೆ ಪಡೆಯುವ ಅವಕಾಶವಿದ್ದರೂ ಎಲ್ಲವನ್ನೂ ತ್ಯಜಿಸಿ ದೇಶಕ್ಕಾಗಿ ಬದುಕು ಮೀಸಲಿಟ್ಟರು ಎಂದು ತಿಳಿಸಿದರು.
ಫೌಂಡೇಷನ್‌ನ ಸತೀಶ್, ಶಾರದಾ, ಕವಿತಾ ಇದ್ದರು.