ನೇತಾಜಿ ನಾಯಕತ್ವ ಸ್ತುತ್ಯಾರ್ಹ

Netaji's leadership is commendable
ಗೊಳಸಂಗಿ ಸಮೀಪದ ಕೂಡಗಿ ಎನ್‌ಟಿಪಿಸಿ ವ್ಯಾಪ್ತಿಯ ಟೌನ್‌ಶಿಪ್ ಕ್ರೀಡಾಂಗಣದಲ್ಲಿ ನೇತಾಜಿ ಸುಭಾಸಚಂದ್ರ ಭೋಸ್ ಅವರ ಪ್ರತಿಮೆಗೆ ನಮನ ಸಲ್ಲಿಸಲಾಯಿತು. ಸಿಜಿಎಂ ಬಿದ್ಯಾನಂದ್ ಝಾ, ಹಿರಿಯ ಅಧಿಕಾರಿಗಳಾದ ಕೆ.ಕೆ.ಹೋಟಾ, ಅಲೋಕೇಶ ಬ್ಯಾನರ್ಜಿ ಇತರರಿದ್ದರು.
Published on

ಗೊಳಸಂಗಿ: ಭಾರತ ಸ್ವಾತಂತ್ರೃ ಸಂಗ್ರಾಮದಲ್ಲಿ ‘ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರೃ ನೀಡುತ್ತೇನೆ ಎಂದೆನ್ನುತ ದೇಶಭಕ್ತಿ, ಧೈರ್ಯ, ನ್ಯಾಯ, ನಿಷ್ಟುರದ ಪ್ರತೀಕವಾಗಿದ್ದ ನೇತಾಜಿ ಸುಭಾಸಚಂದ್ರ ಭೋಸ್ ಅವರ ನಾಯಕತ್ವ ಅವರ್ಣನೀಯ ಎಂದು ಕೂಡಗಿ ಎನ್‌ಟಿಪಿಸಿ ಯೋಜನಾ ಮುಖ್ಯಸ್ಥ (ಸಿಜಿಎಂ) ಬಿದ್ಯಾನಂದ ಝಾ ಹೇಳಿದರು.

ಸಮೀಪದ ಕೂಡಗಿ ಎನ್‌ಟಿಪಿಸಿ ವ್ಯಾಪ್ತಿಯ ಟೌನ್‌ಶಿಪ್‌ನಲ್ಲಿನ ನೇತಾಜಿ ಸುಭಾಸಚಂದ್ರ ಭೋಸ್ ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೇತಾಜಿ ಸುಭಾಸಚಂದ್ರ ಭೋಸ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತ್ಯಾಗ ಮತ್ತು ರಾಷ್ಟ್ರೀಯತೆಯ ಪ್ರತಿಬಿಂಬ ನೇತಾಜಿ ಅವರಾಗಿದ್ದರು. ಅವರ ಪ್ರಯತ್ನ ಮತ್ತು ದೃಷ್ಟಿಕೋನ ಯುವ ಪೀಳಿಗೆಯನ್ನು ನಿಸ್ವಾರ್ಥತೆ, ಏಕತೆ ಮತ್ತು ರಾಷ್ಟ್ರಸೇವೆಯ ಆದರ್ಶಗಳ ಕಡೆಗೆ ಪ್ರೇರೇಪಿಸುತ್ತದೆ ಎಂದರು.

ಒ ಆ್ಯಂಡ್ ಎಂ ಜನರಲ್ ಮ್ಯಾನೇಜರ್ ಕೆ.ಕೆ.ಹೋಟಾ, ಸಿ ಆ್ಯಂಡ್ ಐ ಜನರಲ್ ಮ್ಯಾನೇಜರ್‌ಗಳಾದ ಅಲೋಕೇಶ ಬ್ಯಾನರ್ಜಿ, ಯು.ಕೆ.ಜೈನ್, ಎ್ಎಂ ವಿಭಾಗದ ಜನರಲ್ ಮ್ಯಾನೇಜರ್ ಶ್ರೀನಿವಾಸ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net