ನೇತಾಜಿ ಜನ್ಮದಿನೋತ್ಸವ ಇಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಾರತ ಏಕತಾ ಆಂದೋಲನ, ಬಸವ ಶಾಂತಿ ಮಿಷನ್​ ಹಾಗೂ ಶ್ರೀ ಸಾಯಿ ಪಿಯು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಆಶ್ರಯದಲ್ಲಿ ನೇತಾಜಿ ಸುಭಾಷ ಚಂದ್ರ ಭೋಸರ 128ನೇ ಜನ್ಮದಿನೋತ್ಸವ ಸಮಾರಂಭವನ್ನು ಜ. 23ರಂದು ಸಂಜೆ 5 ಗಂಟೆಗೆ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಲಾಗಿದೆ ಎಂದು ಬಸವಶಾಂತಿ ಮಿಷನ್​ ಅಧ್ಯಕ್ಷ ಮಹಾದೇವ ಹೊರಟ್ಟಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಅತಿಥಿಗಳಾಗಿ ಹಿರಿಯ ಸಾಹಿತಿ ರಂಜಾನ ದರ್ಗಾ, ಚಿಂತಕ ಡಾ. ಶಿವಾನಂದ ಶೆಟ್ಟರ್​, ಡಾ. ವೀಣಾ ಬಿರಾದಾರ, ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಆಗಮಿಸಲಿದ್ದಾರೆ. ಗಿರೀಶ ಆಶ್ರಮದ ಗೋಪಾಲ ಮಹಾರಾಜರು, ಶಂಕರ ಕುಂಬಿ ಅವರಿಗೆ ಸನ್ಮಾನಿಸಲಾಗುವುದು.

ನೇತಾಜಿಯವರ ಆಝಾದ ಹಿಂದ ಸೇನೆಯಲ್ಲಿ ಸೇವೆ ಸಲ್ಲಿಸಿದ ಧಾರವಾಡ ಸಾಧನಕೇರಿಯ ದಿ.ಹುಸೇನಸಾಬ ಗುಡೂಬಾಯಿ ಬಗ್ಗೆ ಬರೆದ ಪುಸ್ತಕ ಲೋಕಾರ್ಪಣೆ ಮಾಡಲಾಗುವುದು. ಡಾ. ಶ್ರೀಧರ ಕುಲಕರ್ಣಿ, ಡಾ. ಶಾರದಾ ಭಟ್ಟ, ಅಂಜಲೀನಾ ಗ್ರೆಗರಿ ಅವರು ನೇತಾಜಿ ಮತ್ತು ಆಝಾದ ಹಿಂದ ಸೇನಾ ಗೀತೆ ಪ್ರಸ್ತುತಪಡಿಸಲಿದ್ದಾರೆ. ಸುರೇಶ ನಿಡಗುಂದಿ ತಬಲಾ, ರವೀಂದ್ರ ಪಾಟೀಲ ಹಾಮೋರ್ನಿಯಂ ಸಾಥ್​ ನೀಡಲಿದ್ದಾರೆ ಎಂದು ಮಹಾದೇವ ಹೊರಟ್ಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net